Tuesday 9 November 2021

ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು ಎನ್ನ ಮಂದಿರಕೆ ankita gopala vittala NINNE IRULINALI CHENNIGA PURUSHANU ENNA MANDIRAKE




time 0.33 minutes



ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು 
ಎನ್ನ ಮಂದಿರಕೆ ಬಂದಿರುವ ಇವನ್ಯಾರೆ ಅವ್ವ             ।।ಪ॥ 

ಕಣ್ಣು ಬಿಡುತಲೆ ಬೆನ್ನೊಳಗಡಗಿಸಿ 
ತನ್ನ ಮೋರೆತ್ತಿ ನೋಡನೆ ಬಾಯಾರಿಹನೆ 
ಮಣ್ಣು ನಲುವುತಾನೆ ತನ್ನೊಳು ಕಾದಿ ಉಣದೆ 
ಹೆಣ್ಣುಗಳನೆ ಮೋಹಿಸುವ ಹಯನೇರಿ ಮೆರೆವ             ।।೧।।

ಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪ 
ಪಲ್ಗಿರಿದು ದಾನವ ಬೇಡುವ ಪೆತ್ತವಳನೆ ಜರಿವ 
ಶಿಲೆಯ ಮಾತಾಡಿಸುವ ಕೊಳಲೂದಿ ಕೃತ್ಯವೇದ 
ಹಳಿವ ಹಗೆಗಳನೆ ಸದೆಬಡಿವ ಹಯನೇರಿ ಮೆರೆವ        ।।೨।।

ಚರಣ ರೋಮಗಳಿಲ್ಲ ಮಗನ ಮುಗಿಲೆ ಬಂದ 
ಎರಡು ರೂಪದಿ ಬಾಲಕ ಬಾಹುಜಕುಲಗೊಯ್ಕ 
ಅರಸಾಗಿ ಗೋಪಾಲವಿಠಲ ಮೋಹಖಳರ ತರಿವ 
ತನ್ನಾಳಾಗನೆ ಪಾರವ ಹಯನೇರಿ ಮೆರೆವ                 ।।೩।।
****

ರಾಗ :  ಪುನ್ನಾಗವರಾಳಿ   ತಾಳ : ಆದಿ (raga, taala may differ in audio)

Ninne irulinali chenniga purushanu
Enna mamdirake bandiruva ivanyare avva ||pa||

Kannu bidutale bennolagadagisi
Tanna moretti nodane bayarihane
Mannu naluvutane tannolu kadi unade
Hennugalane mohisuva hayaneri mereva ||1||

Jalava bittare satata nelane kedarutalippa
Palgiridu danava beduva pettavalane jariva
Sileya matadisuva kolaludi krutyaveda
Haliva hagegalane sadebadiva hayaneri mereva ||2||

Carana romagalilla magana mugile bamda
Eradu rupadi balaka bahujakulagoyka
Arasagi gopalavithala mohakalara tariva
Tannalagane parava hayaneri mereva ||3||
***


No comments:

Post a Comment