RSS song
ಕಟ್ಟಬನ್ನಿ ತರುಣರೆ ನವಭಾರತದೇಶವ
ಸ್ವತ್ವ ಸ್ವಾಭಿಮಾನಭಾರಿತ ಶಕ್ತಿವಂತ ರಾಷ್ಟ್ರವ...ನವಭಾರತ ದೇಶವ || ||ಪ||
ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿಬೆಳೆದು ತನ್ನತನದ ಹೊನ್ನಿನಂತ ಬೆಳೆಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ ||೧||
ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿ
ಅಗ್ನಿಯಂತುರಿಯುತಿದೆ ತರುಣಶಕ್ತಿ ||೨||
ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿ
ದುಷ್ಕಾಲನಾಗರನ ಹೆಡೆಯ ಮೆಟ್ಟಿ
ದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮುಸುತ
ಅರುಣನಂತರುಳುತಿದೆ ತರುಣಶಕ್ತಿ ||೩||
***
kaTTabanni taruNare navaBAratadESava
svatva svABimAnaBArita SaktivaMta rAShTrava...navaBArata dESava || ||pa||
kittubisuTu suttaliruva viShama viShada kaLeyanu
bittibeLedu tannatanada honninaMta beLeyanu
cittadalli maneya mADidaMtha Brameya tolagisi
kattalannu dUragoLisi dhyEyadIpa beLagisi ||1||
jagake anna nIDaballa sAmarthya namagire
karadoLEke bhikShApAtre annapUrNe I dhare
yaj~jayAgagaLa tapatyAgagaLa pratinidhisi
agniyaMturiyutide taruNaSakti ||2||
hemmeyiMdedeyetti himmaDiya dharegotti
duShkAlanAgarana heDeya meTTi
diktaTadi hoMgiraNadOkuLiya cimmusuta
aruNanaMtaruLutide taruNaSakti ||3||
***
ಕಟ್ಟಬನ್ನಿ ತರುಣರೇ ನವಭಾರತದೇಶವ
ಸ್ವತ್ವ ಸ್ವಾಭಿಮಾನಭರಿತ ಶಕ್ತಿವಂತ ರಾಷ್ಟ್ರವ ನವಭಾರತ
ದೇಶವ || ||ಪ||
ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿಬೆಳೆದು ತನ್ನತನದ ಹೊನ್ನಿನಂಥ ಬೆಳೆಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ ||೧||
ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ
ಬೆವರು ಸುರಿಸಿ ಸಾಧಿಸೋಣ ಪ್ರಗತಿ ಸ್ವಾವಲಂಬನೆ
ನಮ್ಮ ಸಿರಿಯ ದೋಚಲೆಂದು ಹಾಕುತಿರುವರು ಹೊಂಚನು
ಸುಮ್ಮನಿರದೆ ವಿಫಲಗೊಳಿಸಿ ಬಹುರಾಷ್ಟ್ರವ ಸಂಚನು
ನಾದನೊದೆವ ಮಂದಿಯೊಡನೆ ಒಪ್ಪಂದ ಸಲ್ಲದು
ಸ್ವದೇಶ ನಿಷ್ಠೆಯೊಂದೆ ನಮ್ಮ ಕಾಪಾಡಬಲ್ಲದು
ದೀನರಲ್ಲ ನಾವು ಮತಿಹೀನವಲ್ಲ ಭಾರತ
ಸೋಲನೆಂದೂ ಒಲ್ಲೆವೆಂದು ವಿಶ್ವಕೆಲ್ಲ ಸಾರುತ
ಗ್ರಾಮಗ್ರಾಮಗಳನು ಸುತ್ತಿ ಗೈದು ಜನಜಾಗೃತಿ
ನಿರ್ಮಿಸೋಣ ಸ್ವಾಭಿಮಾನ ಸಂಪನ್ನ ಸಂಸ್ಕೃತಿ
***
No comments:
Post a Comment