ಬಿಡದೆ ಭಜಿಸಿ ಬೊಮ್ಮ ಮೃಡ ಮುಖ್ಯ ಸುರರಿಗೆ
ಒಡೆಯನೆನಿಪ ಮುದ್ದು ಉಡುಪಿಯ ಕೃಷ್ಣ ||ಪ||
ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-
ರಡಿಗಡಿಗವರ ವಾಂಛಿತ ವಸ್ತುವ
ಕಡೆದು ಕೊಡುವೆನೆಂದು ಕಡೆಗೋಲ ನೇಣನೆ
ಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ ||೧||
ಹರಿಸರ್ವೋತ್ತಮನೆಂಬೊ ಪರಮ ಸಿದ್ಧಾಂತಕ್ಕೆ ಮ-
ಚ್ಚರಿಸುವ ಕುಮತದ ಕುಜನರ
ಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದು
ವರಪಾಶದಂಡಧಾರಿಯಾಗಿ ತೋರಿಪ್ಪನ ||೨||
ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬುಧ
ನಿಕರಕ್ಕೆ ಪೇಳಲು ದ್ವಾರಕಾಪುರಿಯಿಂ
ಸುಖತೀರ್ಥಮುನಿಗೆ ಸುಖಕರನಾಗಿ ಬಂದ
ಅಕುಟಿಲ ಕೃಷ್ಣ ಹಯವದನರಾಯನ ||೩||
***
biDade bhajisi bomma mRuDa mukhya surarige
oDeyanenipa muddu uDupiya kRuShNa ||pa||
poDaviyoLage tanna aDigaLa dhEnipa-
raDigaDigavara vaaMCita vastuva
kaDedu koDuveneMdu kaDegOla nENane
piDidiha siriyaraa dRuDhake mechchidana ||1||
harisarvOttamaneMbo parama siddhaaMtakke ma-
chcharisuva kumatada kujanara
bharadi baMdhisi bannaMbaDidu shikShipeneMdu
varapaashadaMDadhaariyaagi tOrippana ||2||
bhaktavatsalaneMbo sulabhOktiyanu budha
nikarakke pELalu dwaarakaapuriyiM
sukhatIrthamunige sukhakaranaagi baMda
akuTila kRuShNa hayavadanaraayana ||3||
***
No comments:
Post a Comment