Sunday, 26 December 2021

ಅಂಧನೋ ನಾ ಬಲು ಅಂಧನೋ ankita gurugovinda vittala

 ರಾಗ - : ತಾಳ -


ಅಂಧನೋ ನಾ ಬಲು ಅಂಧನೋ ll ಪ ll


ಸುಂದರವಾದ ಹೃನ್ಮಂದಿರದಲಿ ನಿನ್ನ 

ಸುಂದರ ಮೂರ್ತಿಯ ಕಣ್ದೆರದು ಕಾಣದ ll ಅ ಪ ll


ಬಹಿರದಲ್ಲಿ ಬಹು ಪರಿಯ ಅಂಗಡಿನೆರಹಿ

ಬಹುಜನರ ಮೆಚ್ಚಿಸಿ ಕುಹಕ ಚಿಂತಿಸುವ l

ಅಹುದು ಸಜ್ಜನನೆಂದು ಬಹುಜನ ನುಡಿಯಲು

ಮಹಮೋದ ಮಡುವಿನೊಳ್ ಮಹದಜ್ಞನೆನಿಸಿದ ll 1 ll


ವಿಷಮ ದುರ್ವಿಷಯಗಳಲಿ ಮನ ಹೋಗಿಸೀ l

ವಿಷವೆಂದು ತಿಳಿದು ವಿಷಯ ಸೇವಿಸೀ l

ಅಸಮ ಮಹಿಮ ನಮ್ಮ ಝಷಕೇತು ಜನಕನ 

ವಿಷಯಗಳ ಬಹು ವಿಷಯೀಕರಿಸದಂಥ ll 2 ll


ಹೃದಯ ಮಂದಿರ ಮಧ್ಯ l ಸದಮಲ ಪೀಠದಿ 

ಸುದತೇರಿಂದೊಡಗೂಡಿ l ವಿಧಿಭವ ಸನ್ನುತ 

ಮದನ ಜನಕ ಗುರು l ಗೋವಿಂದವಿಟ್ಠಲನ 

ಮುದದಿ ನೋಡದ ಬಲು l ಮದಡು ಮಾನವ ನಾ ll 3 ll

***


No comments:

Post a Comment