Sunday, 26 December 2021

ಮಂಗಳಗಿರಿ ನರಕೇಸರೀ ಕಾಯೊ ankita gurugovinda vittala

 ರಾಗ –  :  ತಾಳ –


ಮಂಗಳಗಿರಿ ನರಕೇಸರೀ l ಕಾಯೊ 

ಶೃಂಗಾರ ಮೂರುತಿ ನರಹರಿ ll ಪ ll


ಅಂಗಜಪಿತನೆ ಕಾ l ಳಿಂಗ ಮರ್ದನ ಸಾಧು

ಸಂಗ ಪಾಲಿಸಿ ಭವ l ಭಂಗವ ಬಿಡಿಸಯ್ಯ ll ಅ ಪ ll


ಮಾಣವಕನಾಗಿ ಬಲಿಯಾ l ಭೂಮಿ 

ದಾನಬೇಡಿ ಶಿರ ತುಳಿದೆಯಾ l

ದೀನವತ್ಸಲ ರಂಗ l ಮೌನಿ ಧ್ಯಾನಗಮ್ಯ 

ಪಾನಕ ಕುಡಿದು ಸು l ಜ್ಞಾನವ ಪಾಲಿಸು ll 1 ll


ಭಕ್ತ ಪ್ರಹ್ಲಾದನ ಪೋಷಕಾ l ತಪ 

ಶಕ್ತಿ ಹಮ್ಮಿನ ಕಶಿಪು ಮಾರಕಾ l

ಕರ್ತ ನೀನೇ ಎಂಬ l ಉಕ್ತಿ ಸ್ಫುರಿಸಿ ವಿ 

ರಕ್ತಿ ಪಾಲಿಸೊ ರಂಗ l ಭಕ್ತರುದ್ಧರಣ ll 2 ll


ಗೋವುಗಳೊಳಗೆ ಉದ್ಗೀಥಾ l ಗುರು

ಗೋವಿಂದವಿಟ್ಠಲ ವರ ದಾತಾ l

ಜೀವರ ಹೃದಯದೊ l ಳಾವಾಗು ನೆಲಿಸುತ್ತ 

ಕಾವನೆಂದೆಂಬರ l ಕಾವಾದೆ ಬಿಡನಯ್ಯ ll 3 ll

***


No comments:

Post a Comment