Monday, 1 November 2021

ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ ankita venkata

ಶ್ರೀ ತುಪಾಕಿ ವೆಂಕಟರಾಮನಚಾರ್ಯರ ಕೃತಿ


 ರಾಗ - : ತಾಳ -


ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ

ಚಿತ್ತಜನಯ್ಯ ಚಿನ್ಮಯ ಎನ್ನ ದೊರೆಯೆ ll ಪ ll


ಅರಿಯೆ ನಾನಾ ವಾಹನಾದಿ ವಿಧಿಯನು

ಮರಿಯೆನು ಮನದಲ್ಲಿ ಮಂದಭಾವವನು

ವರದೇಶ ನಿನ್ನಯ ಚರಣಾರವಿಂದವ

ನೆರೆನಂಬಿದವನೆಂಬ ಪರಿಯಿಂದ ದಯವಾಗು ll 1 ll


ಇಂದಿರಾವರವಿಧಿವಂದ್ಯ ಸರ್ವೆಶಾ-

ನಂದ ಚಿದ್ಘನ ನಿತ್ಯ ಸುಂದರ ವೇಷಾ

ಮಂದ ಬುದ್ಧಿಯೊಳೆಂತು ಒಲಿಸುವೆ ಶ್ರೀಶಾ

ತಂದೆ ನೀ ಕರುಣದಿ ಸಲಿಸಭಿಲಾಷಾ ll 2 ll


ಅಣುರೇಣು ತೃಣಕಾಷ್ಠ ಪರಿಪೂರ್ಣ ನಿನ್ನ

ನೆನೆದು ವಂದಿಸುವೆ ಚಂದನ ಮೂರ್ತಿಯನ್ನ

ಸನಕಾದಿ ವಂದ್ಯ ಶೇಷಾಚಲನಾಯಕ

ಅನಿಮಿಷ ಪತಿಯೆನ್ನ ಮನೆಯಲ್ಲಿ ನೆಲೆಯಾಗು ll 3 ll

***

No comments:

Post a Comment