|| ಜೋಗುಳ ||
ಪಾಡಿ ತೂಗಿದಳೆ ಪರಮಾತ್ಮನ | ಯಶೋಧಾ ದೇವಿ | ನೋಡಿ ಹಿಗ್ಗಿದಳೆ ಸರ್ವೋತ್ತಮನ ||ಪ||
ಮಾಣಿಕದ ತೊಟ್ಟಿಲೊಳಿಟ್ಟು ತೂಗಲು | ಪಾಡೀ ತೂಗಿದಳೆ ಪರಮಾತ್ಮನ ||ಅ.ಪ||
ಕ್ಷೀರವಾರಿಧಿ ಶ್ರೀಹರಿ ತಾನು | ಆಲದೆಲೆ ಮೇಲೆ | ಬಾಲರೂಪಿನಲಿ ಪವಡಿಸುತಿರಲು |
ವೇದಾಂತವೇದ್ಯದಿ ನಲಿಯುತ ತಾನು | ಮಾಧವ ಮಧುಸೂಧನ | ಮುದ್ದು ಕೃಷ್ಣನ ||೧||
ನೀರೊಳು ಮುಳುಗಿ ಭಾರವ ಪೊತ್ತು | ಬಲಿಚಕ್ರವರ್ತಿಯಾ | ಮೂರಡಿ ಭೂಮಿಯ ದಾನವ ಬೇಡಿ |
ನಾರಿ ಸೀತೆಯ ತಂದು ಕ್ಷೀರ ಪಾವನ ಮಾಡಿ | ಧೀರನಾಗಿಯೆ ಕುದುರೆ ಏರಿ ಕೃಷ್ಣಯ್ಯನ ||೨||
ಪಂಕಜನಾಭನೆ ಪಾವನಚರಿತ | ತನ್ನ ಬೆರಳ | ಬಾಯೊಳಗಿಟ್ಟು ನಲಿವ |
ತನ್ನ ತಾಯಿಯ ಮುಖ ನೋಡುತ ನಲಿಯುತ | ಉನ್ನತ ಗಿರಿವಾಸ ಚೆನ್ನಕೇಶವರಾಯನ ||೩||
***
No comments:
Post a Comment