Monday, 1 November 2021

ನಂಬಿರೊ ಸರ್ವಜ್ಞ ಮುನಿಯಾ ankita venkata

  ತುಪಾಕಿ ವೆಂಕಟರಮಣಾಚಾರ್ಯರ ಕೃತಿ

(ಶ್ರೀ ಮಧ್ವಾಚಾರ್ಯರ ಪ್ರಾರ್ಥನೆ)


ನಂಬಿರೊ ಸರ್ವಜ್ಞ ಮುನಿಯಾ ವ್ಯರ್ಥ

ಹಂಬಲಗೊಳದಿರಿ ಹಲವು ಮೋಹದಲಿ ಪ.


ಭೀಮ ವಿಕ್ರಮ ವಾಲಿಯಿಂದ ಬಹು

ತಾಮಸಗೊಂಡ ಸೂರ್ಯಜನನು ಬಂದಾ

ತಾ ಮಾಡಿದನು ಕೃಪೆಯಿಂದ ರಘು

ರಾಮನ ತೋರಿಸಿ ನಲಿಸಿದಾನಂದಾ 1


ಮಾಗಧನುಪಟಳದಿಂದಾ ಶಿವ

ಯಾಗ ಮಾಡುವೆನೆಂದು ಗಿರಿಗೂಹ ಬಂದಾ

ಸಾಗಿದ ನೃಪವ ವೃಂದಾವೆಲ್ಲ

ಬೇಗ ಬಿಡಿಸಿ ಕಾಯ್ದ ಬಹು ಕೃಪೆಯಿಂದಾ 2


ಮಾಯಾವಾದವ ಪೇಳ್ವ ಬಾಯಿ ಕೆಟ್ಟ

ನಾಯಿಗಳನು ಸಾಯ ಬಡಿದವರಯಾ

ಈಯರಸನ ಮುಖ್ಯ ಪ್ರಿಯ ಯೀತ

ನ್ಯಾಯವ ನಡಸುವ ವೆಂಕಟರಾಯ 3

***




No comments:

Post a Comment