Monday, 1 November 2021

ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ankita venkata

 ತುಪಾಕಿ ವೆಂಕಟರಮಣಾಚಾರ್ಯರ ಕೃತಿ

(ಘಟಿಕಾಚಲದ ವಾಯುದೇವರನ್ನು ನೆನೆದು)


ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ

ತ್ರಿಜಗದ್ವಲಯವÀ ನಡಸುವಿ ಪ.


ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ

ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ-

ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ-

ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ

ತೋರುವೆಯೊ 1


ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ

ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ

ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ

ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ

ಪರಿಹರಿಸದರನು 2


ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ

ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ

ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ

ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ

ಮುಷ್ಟಿಯಿಂಧೆಂದಿಸಿ ಮೆರೆದನೆ 3


ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು

ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ

ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು

ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು

ಧಾಮನಿರ್ಜರೋದ್ಧಾಮ ಸುಮಹಿಮ 4


ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ

ವಾಸರ ಒಲುಮೆಯಿಂದಲುದಿಸಿ

ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ

ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ

ಘಟಿಕಾಚಲದಲಿ ನೆಲಿಸಿದೆ 5

***



No comments:

Post a Comment