Tuesday, 28 September 2021

ಕಡಗೋಲಾ ನೇಣಾ ಪಿಡಿದವನ್ಯಾರೆ ನೋಡಮ್ಮಯ್ಯ ankita vyasa vittala

 ರಾಗ -  :  ತಾಳ - 


ಕಡಗೋಲಾ ನೇಣಾ ಪಿಡಿದವನ್ಯಾರೆ ನೋಡಮ್ಮಯ್ಯ l

ಮೃಡ ಸುರಪಾದ್ಯರ ವಡನಾಡುವ ಪಾ l

ಲ್ಗಡಲಶಯನ ಜಗದೊಡೆಯ ಕಾಣಮ್ಮ ll ಪ ll


ಹೇಮ ಸುಮಣಿಗಣ ಮಂಡಿತ ಸಿಂಹಾಸನವು ನೋಡಮ್ಮಯ್ಯ l

ರಾಮೆಲಕುಮಿ ಸತ್ಯಭಾಮೆಯರೆಡಬಲದಲಿ ನೋಡಮ್ಮಯ್ಯ l

ತಾಮರಸಾಪ್ತರ ಧಾಮದಂತೆ ಶೋಭಿಸುವಾ ನೋಡಮ್ಮಯ್ಯ l

ಸೋಮಕುಲೋದ್ಭವ ಭೀಮಾದಿಗಳನು l 

ಪ್ರೇಮದಿ ಸಲಹುವ ಶ್ರೀಮನೋಹರನೆ ll 1 ll


ಯುತಿವರ ತತಿ ಕರ ಶತಪತ್ರಾರ್ಚಿತನ್ಯಾರೆ ನೋಡಮ್ಮಯ್ಯ l

ಶತಸಾಕಾರ ಮನ್ಮಥಲಾವಣ್ಯದ ಸಿರಿಯೇ ನೋಡಮ್ಮಯ್ಯ l

ಕ್ಷಿತಿಸುರಗಣ ಸತತ ಸಮ್ಮತವಾಗಿರೆ ನೋಡಮ್ಮಯ್ಯ l

ವಿತತ ವಿಖ್ಯಾತ ವಿಶ್ರುತ ಸ್ತುತಿ ಪರುಬುಧ l

ಶತದೃತಿ ಪಿತ ಸದ್ಗತಿದಾಯಕನೆ ll 2 ll


ಅಜ ನೀರಜ ಪಂಕಜಪತಿ ಭುಜಗಾಸನನೆ ನೋಡಮ್ಮಯ್ಯ l

ನಿಜ ದ್ವಾರಕಿಯಲಿ ನಿರತ ಮಹಾವೈಭವವನೆ ನೋಡಮ್ಮಯ್ಯ l

ವಿಜಯಪ್ರದ ವ್ಯಾಸವಿಟ್ಠಲ ಬರಲ್ಯಾಕೆ ನೋಡಮ್ಮಯ್ಯ l

ದ್ವಿಜನುತ ಮುನಿಪರ ಭಜನಿಗೊಲಿದು ಈ l

ರಜತಪೀಠ ನಿಜ ನಿಲಯ ಕಾಣಮ್ಮ ll 3 ll

***


No comments:

Post a Comment