Monday, 6 September 2021

ಜೈ ಜೈ ಜೈ ಜೈ ಜೈ ಶ್ರೀ ಗುರುರಾಜಾ ಜೈ ಜೈ ankita vittalesha

 ankita ವಿಠಲೇಶ  

ರಾಗ: ಆನಂದಭೈರವಿ ತಾಳ: ಆದಿ


ಜೈ ಜೈ ! ಜೈ ಜೈ ! ಜೈ !

ಶ್ರೀ ಗುರುರಾಜಾ ಜೈ ಜೈ


ಶ್ರೀಸುಧೀಂದ್ರಕರಜಾತ ವರದೇಂದ್ರ

ರಾಘವೇಂದ್ರ ಸಿರಿಸದ್ಗುಣಸಾಂದ್ರ

ಭೂಸುರೇಂದ್ರ ಭವತಾಪಚಂದ್ರ ಜೈ

ದಾಶರಥಿಯ ದಯ ಭಾಗ್ಯಜ್ಯೋತಿ ಜೈ 1

ತುಂಗಭದ್ರೆಸಿರಿತೀರವಿರಾಜಾ

ತುಂಗವಿಕ್ರಮತಪೋನಿಧಿ ತೇಜಾ

ಮಂಗಲಂ ಕೊಡುವ ಕೀರ್ತಿಕಾಂತಿ ಜೈ

ರಂಗನಾಥಪದಧ್ಯಾನಮೂರ್ತಿ ಜೈ 2

ಮಂತ್ರಸದನ ಬೃಂದಾವನವಾಸಿ

ಸಂತಸಾಧುಜನ ಸಂಭ್ರಮತೋಷಿ

ತಂತ್ರ ಸರ್ವ ಸ್ವಾತಂತ್ರ್ಯಮೂರ್ತಿ ಜೈ

ಶಾಂತಿದಾತ ವಿಠಲೇಶದೂತ ಜೈ 3

***


No comments:

Post a Comment