Monday, 6 September 2021

ಚಂದ್ರಿಕಾ ಚಿನ್ಮಯವು ಸಾಂದ್ರವಾಗಿದೆ ಪ್ರಭುವೇ ankita vittalesha

 ankita ವಿಠಲೇಶ  

ರಾಗ: ಸೂರಮಲ್ಹಾರ ತಾಳ: ಝಂಪೆ


ಚಂದ್ರಿಕಾ ಚಿನ್ಮಯವು ಸಾಂದ್ರವಾಗಿದೆ ಪ್ರಭುವೇ

ಇಂದ್ರನೀಲಚ್ಛವಿಯ ವೃಂದಾವನದೊಳೆಸೆವ


ಮಾಯಿಮತಗಳನಳಿದು ನ್ಯಾಯಾಮೃತವ ಸುರಿಸಿ

ಶ್ರೀಯರಸ ಸನ್ನಿಧಿಯ ರಾಯರಂಜಿಸಿ ಮೆರೆವ 1

ತಂಡತಂಡದಿ ಬರುವ ಪುಂಡವಾದಿಗಳೆಲ್ಲ

ದಿಂಡುಗೆಡಹುತ ತರ್ಕತಾಂಡವಾಡಿಸುತಿರುವ 2

ಉದಧಿ ವೇದಾಂತದೊಳು ಉದಯಿಸಿದ ಸುಧೆಯೊಳಗೆ

ಮುದದಿ ಪರಿಮಳವೆರಸಿ ಬುಧರ ತೋಷಿಸುತಿರುವ 3

ಸೀತಾಪತಿಯ ಮಹಿಮೆ ಭೂತಳದಿ ಬೆಳಗಿಸಿದ

ನೂತನ ಪ್ರಕಾಶಮಯ ಗೀತಾವಿವೃತ್ತಿಯುತ 4

ನರಹರಿಯ ತೋರಿಸಿದ ಧೊರೆತನದಿ ಶೋಭಿಸಿದ

ವರದವಿಠಲೇಶಪ್ರಿಯ ಗುರು ರಾಘವೇಂದ್ರ ಮುಖ 5

****


No comments:

Post a Comment