ankita ವಿಠಲೇಶ
ರಾಗ: ಬೃಂದಾವನಸಾರಂಗ ತಾಳ: ತ್ರಿ
ಸುಜನರಶುಭಚಂದ್ರ ಶ್ರೀ ರಾಘವೇಂದ್ರ ಪ
ಭಜಿಸುವೆ ನಿಮ್ಮನು ನಿಜಮತಿ ಪಥದೋರೋ ಅ.ಪ
ಮನವು ನಿಶ್ಚಲ ನಿಲ್ಲದೋ ಸುಧೀಂದ್ರಜಾ
ತನುವು ಸ್ಥಿರಕೆ ಒಲ್ಲದೋ
ಘನಮಹಿಮನೆ ನಿನ್ನಾಪನಿತು ಭಜಿಪುದೆಂತು
ಅನುರಾಗದಿ ನೋಡೋ ಫಣಿಶಯನನ ಪ್ರಿಯಾ 1
ವೇದಶಾಸ್ತ್ರಗಳನರಿಯೆ ಹೇ ಧೊರೆಯೇ
ಬೋಧತತ್ತ್ವವತಿಳಿಯೇ
ಸಾಧಿಸಿ ನಿಮ್ಮಯ ನಾಮ ಒಂದೆ ಬಲ್ಲೆ
ನೀ ದಯದೋರಿ ಸುಮಾರ್ಗ ತೆರೆದು ಕಾಯೋ 2
ಮನಕೆ ಕಣ್ಣುಗಳಿರಿಸೋ ನಿನ್ನಯ ನಾಮ
ಧ್ವನಿಯ ಅಮೃತ ಉಣಿಸೋ
ಕ್ಷಣಕ್ಷಣ ಚಿಂತನೆ ಚಿತ್ತಶುದ್ಧಿಯನಿತ್ತು
ಅನುದಿನ ಪಾಲಿಸೋ ವಿಠಲೇಶ ವರದೂತ 3
***
No comments:
Post a Comment