Monday 6 September 2021

ವೃಂದಾವನವು ಇರುವೆಡೆ ನೋಡಿ ಬರುವೆ ನಾ ಓಡೋಡಿ ankita seetarama vittala

 ರಾಗ: ಸಾರಂಗ ತಾಳ: ಆದಿ


ವೃಂದಾವನವು ಇರುವೆಡೆ ನೋಡಿ ಬರುವೆ ನಾ ಓಡೋಡಿ

ವಂದ್ಯ ಯತಿಗಳ ದರುಶನಮಾಡಿ ಕುಣಿಯುವೆ ನಲಿದಾಡಿ ಗುರು


ಚಿತ್ತವಮಾಡುತ ಚಂದದ ಗಾಡಿ ಇಷ್ಟಾಶ್ವವಹೂಡಿ

ಹತ್ತುತಲದನು ಸೇರುವೆ ಗುರುವಡಿ ಕ್ಷಣಮಾತ್ರದಿ ನೋಡಿ 1

ರಾಯರು ಭಕ್ತರು ಕರೆದೆಡೆ ಓಡಿ ನಿಲ್ಲುವ ಆ ಮೋಡಿ

ಕಾಯುತಲವರನು ಹರಸಿ ಕಾಪಾಡಿ ಪಾಲಿಪರ್ಗೆಲ್ಲಿದೆ ಜೋಡಿ 2

ಬರುವರು ಭಕ್ತರು ಚಿಂತೆಲಿ ಬಾಡಿ ಮನದಳಲನು ತೋಡಿ

ಹರಿಸಿರಿ ತಾಪವ ಕರುಣವ ಮಾಡಿ ಎನ್ನುತ ತನುವನು ಈಡ್ಯಾಡಿ 3

ಆಯವುತಪ್ಪದ ತೆರದಿ ಕಾಪಾಡಿ ಮೆರೆವುದ ನಾ ಹಾಡಿ

ರಾಯರ ಸ್ಮರಿಸುತ ಹರಿಸುವೆ ಕಾಲಡಿ ಆನಂದ ಬಾಷ್ಪದ ಕೋಡಿ 4

ಗುರು ರಾಘವೇಂದ್ರರು ಹಿಡಿಯುತ ನಾಡಿ ದಿವ್ಯೌಷಧ ನೀಡಿ

ಹರಿವುದು ರೋಗವ ಸಂತಸವೂಡಿ ಈ ಮಹಾವೈದ್ಯರ ರೂಢಿ 5

ಭಕ್ತಿಯ ಬತ್ತಿಯ ಮನದಲಿ ತೀಡಿ ಸಂಭ್ರಮದಾಜ್ಯವ ನೀಡಿ

ಹಚ್ಚಿದ ಜ್ಯೋತಿಲಿ ಬೆಳಗುತ ಗುರುವಡಿ ಕುಣಿಯುವೆ ನಾ ಹಾಡಿ 6

ತಿಳಿಯದು ಆಗುತ ಮನಸಿನ ರಾಡಿ ಬಯಕೆಯು ಕೈಗೂಡಿ

ಹೊಳೆಯುವ ಸೀತಾರಾಮವಿಠಲಡಿ ಗುರುಮೂರ್ತಿ ನೋಡಿ 7

***


No comments:

Post a Comment