ankita ರುಕ್ಮಿಣೀಶವಿಠಲ
ರಾಗ: [ಬಿಲಹರಿ] ತಾಳ: [ಆದಿ]
ಬಾರೈ ಬಾರೈ ಗುರು ಸಾರ್ವಭೌಮನೇ ಪ.
ಉಟ್ಟವಸನವು ತೊಟ್ಟ ಆವಿಗೆ
ಇಟ್ಟ ದ್ವಾದಶ ಊಧ್ರ್ವ ಪುಂಡ್ರವು
ದಿಟ್ಟತನದಿ ಇಟ್ಟು ಕೊರಳೊಳು
ಕಟ್ಟಿ ತುಳಸೀ ಮಣಿ ಮನೋಭೀಷ್ಠವ ಸಲಿಸುತ 1
ದಂಡ ಕಮಂಡಲ ಕೈಯಲಿ ಪಿಡಿದು
ಕಂಡ ಕಂಡದ ಪೂಜೆಗೊಂಬುವ
ಕೊಂಡ ಜನರ ಪರಿಪಾಲಿಸುತಲಿ
ಕಂಡ ಕಂಡವರ ಕಾಯುವ ಕರುಣಿ 2
ಭೂತ ಪ್ರೇತ ಭಯ ನಾಶಗೊಳಿಸಿ
ಭೀತಿಯ ಬಿಡಿಸಿ ಮಂತ್ರಾಲಯದಿ
ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ
ಪ್ರೀತಿಪ ಜನರ ಮನೋಭೀಷ್ಠವೊಲಿದ 3
***
ಬಾರೈ ಬಾರೈ ಗುರು ಸಾರ್ವಭೌಮನೇ ಪ.
ಉಟ್ಟವಸನವು ತೊಟ್ಟ ಆವಿಗೆ
ಇಟ್ಟ ದ್ವಾದಶ ಊಧ್ರ್ವ ಪುಂಡ್ರವು
ದಿಟ್ಟತನದಿ ಇಟ್ಟು ಕೊರಳೊಳು
ಕಟ್ಟಿ ತುಳಸೀ ಮಣಿ ಮನೋಭೀಷ್ಠವ ಸಲಿಸುತ 1
ದಂಡಕ ಮಂಡಲ ಕೈಯಲಿ ಪಿಡಿದು
ಕಂಡ ಕಂಡದ ಪೂಜೆಗೊಂಬುವ
ಕೊಂಡ ಜನರ ಪರಿಪಾಲಿಸುತಲಿ
ಕಂಡ ಕಂಡವರ ಕಾಯುವ ಕರುಣೆ2
ಭೂತ ಪ್ರೇತ ಭಯ ನಾಶಗೊಳಿಸಿ
ಭೀತಿಯ ಬಿಡಿಸಿ ಮಂತ್ರಾಲಯದಿ
ಖ್ಯಾತಿವಂತ ರುಕ್ಮಿಣೀಶವಿಠಲನ ಕರುಣದಿ
ಪ್ರೀತಿಪ ಜನರ ಮನೋಭೀಷ್ಠವೊಲಿದ 3
***
No comments:
Post a Comment