Monday, 6 September 2021

ಜಯ ಮಂಗಳಂ ನಿತ್ಯ ಶುಭಮಂಗಳಂ ಯೋಗೀಂದ್ರತೀರ್ಥಕರ ankita pranesha vittala

ರಾಗ: ಭೈರವಿ ತಾಳ: ಝಂಪೆ

ಜಯಮಂಗಳಂ ನಿತ್ಯ ಶುಭಮಂಗಳಂ


ಯೋಗೀಂದ್ರತೀರ್ಥಕರರಾಜೀವಪೂಜಿತಗೆ

ಭಾಗವತಜನ ಪ್ರಿಯರೆನಿಸುವರಿಗೆ

ಯೋಗಿಗಳಧಿಪತಿ ಸುಧೀಂದ್ರಕರಜಾತರಿಗೆ

ಬಾಗಿ ವಂದಿಪರ ಸಲಹುವ ಸ್ವಾಮಿಗೆ 1

ವರಹಜಾತೀರ ಮಂತ್ರಾಲಯನಿಕೇತನಿಗೆ

ಧರಣಿಯೊಳಗಪ್ರತಿಮಚರಿತೆ ತೋರ್ವರಿಗೆ

ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ

ವರಸುವೃಂದಾವನದಿ ಶೋಭಿಪರಿಗೆ 2

ಆರಾಧನೆಯ ಜನರು ಮಾಡುವುದು ನೋಡಲ್ಕೆ

ವಾರವಾರಕ್ಕಧಿಕವೆನಿಸುವರಿಗೆ

ಮಾರಮಣ ಪ್ರಾಣೇಶವಿಠಲನಂಘ್ರಿಜಲಜಕೆ

ಆರುಪದವೆನಿಪಗೆ ಕರುಣಾಜಲಧಿಗೆ 3

***


ಜಯಮಂಗಳಂ ನಿತ್ಯ ಶುಭಮಂಗಳಂ


ಯೋಗೀಂದ್ರತೀರ್ಥಕರ ರಾಜೀವ ಪೂಜಿತಗೆ


ಭಾಗವತಜನ ಪ್ರಿಯರೆನಿಸುವರಿಗೆ


ಯೋಗಿಗಳ ಅಧಿಪತಿ ಸುಧೀಂದ್ರಕರಜಾತರಿಗೆ


ಬಾಗಿ ವಂದಿಪರ ಸಲಹುವ ಸ್ವಾಮಿಗೆ || ೧ ||


ವರಹಜಾತೀರ ಮಂತ್ರಾಲಯ ನಿಕೇತನಗೆ


ಧರಣಿಯೊಳಗ ಅಪ್ರತಿಮ ಚರಿತೆ ತೋರ್ವರಿಗೆ


ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ


ವರ ಸುವೃಂದಾವನದಿ ಶೋಭಿಪರಿಗೆ || ೨ ||


ಆರಾಧನೆಯ ಜನರು ಮಾಡುವುದು ನೋಡಲಿಕೆ


ವಾರವಾರಕ್ಕಧಿಕವೆನಿಸುವರಿಗೆ


ಮಾರಮಣ ಪ್ರಾಣೇಶವಿಠಲನಂಘ್ರಿ ಜಲಜಕೆ


ಆರುಪದವೆನಿಪಗೆ ಕರುಣಾಜಲಧಿಗೆ || ೩ ||

***


jayamaMgaLaM nitya SubhamaMgaLaM


yOgIMdratIrthakara rAjIva pUjitage

bhAgavatajana priyarenisuvarige

yOgigaLa adhipati sudhIMdrakarajAtarige

bAgi vaMdipara salahuva svAmige || 1 ||


varahajAtIra maMtrAlaya nikEtanage

dharaNiyoLaga apratima carite tOrvarige

kuruDa kivuDAdigaLa bayake pUraiparige

vara suvRuMdAvanadi SObhiparige || 2 ||


ArAdhaneya janaru mADuvudu nODalike

vAravArakkadhikavenisuvarige

mAramaNa prANESaviThalanaMghri jalajake

Arupadavenipage karuNAjaladhige || 3 ||

***

***

 

No comments:

Post a Comment