ankita ಪಂಡರೀನಾಥವಿಠಲ
ರಾಗ: ಆರಭಿ ತಾಳ: [ಆದಿ]
ರಾಘವೇಂದ್ರನೇ ಕರುಣಾಕರ ಗುರು ರಾಘವೇಂದ್ರನೇ ಪ
ರಾಘವೇಂದ್ರ ದುರಿತೌಘವಿದೂರನೆ
ಭಾಗವತಾಗ್ರಣಿ ಬಾಗಿ ಭಜಿಸುವೆನು ಅ ಪ
ಯೋಗಿವಂದಿತ ಶ್ರೀಚರಣದ್ವಯ
ನೀಗಿಸೊ ಭವ
ನಾಗಶಯನ ಹರಿ ನಾರಸಿಂಹನ
ಜಾಗ್ರತೆಯಿಂದಲಿ ಬಿಡದೆ ಧ್ಯಾನಿಸುವ 1
ಶ್ರೀ ಸುಧೀಂದ್ರರ ಖ್ಯಾತಿಯ ಕರಜನೆ
ದೋಷ ದೂರನೇ
ಆಶಿಸುವೆ ತವ ಪಾದ ಸೇವೆಯನು
ದಾಸನೆಂದಾದರದಲಿ ಪಾಲಿಸೋ 2
ಬೇಡಿಕೊಳ್ಳುವೆ ಈ ದಿನ ನಿಮ್ಮನು
ಕಾಡಿ ಕೂಗುವೇ
ಕಾಡುವ ಭವರೋಗ ನೀ ದೂರೋಡಿಸೊ
ನೋಡಿ ಪಂಢರಿನಾಥವಿಠಲನ ದಾಸ 3
***
No comments:
Post a Comment