Sunday, 26 September 2021

ಹರಿನಾಮ ಜಿಹ್ವಯೊಳಿರ ಬೇಕು ನರನಾದ ಮೇಲೆ ankita others

 

ಪಲ್ಲವಿ


ಹರಿನಾಮ ಜಿಹ್ವಯೊಳಿರ ಬೇಕು ನರನಾದ ಮೇಲೆ


ಚರಣ 1


ಭೂತ ದಯಾಪರನಾಗಿರಾ ಬೇಕು ಪಾತಕವೆಲ್ಲವ ಕಳೆಯಲಿ ಬೇಕು

ಮಾತು ಮಾತಿಗೆ ಹರಿ ಎನ ಬೇಕು ನರನಾದ ಮೇಲೆ


ಚರಣ 2


ಶಾಂತಿ ಸಮದಮ ಹಿಡಿಯಲು ಬೇಕು ಭ್ರಾಂತಿ ಅವಗುಣವ ಕಳೆಯಲು ಬೇಕು

ಸಂತತ ಸನ್ಮಾರ್ಗದಲಿರಾ ಬೇಕು ನರನಾದ ಮೇಲೆ


ಚರಣ 3


ಕಾಮ ಕ್ರೋಧವತಾ ಬಿಡ ಬೇಕು ಮಮತೆ ಅಹಂಕಾರವ ನೀಗಲು ಬೇಕು

ಸೌಮ್ಯರ ಸಂಗದೊಳಿರಾ ಬೇಕು ನರನಾದ ಮೇಲೆ


ಚರಣ 4


ವೇದ ಶಾಸ್ತ್ರವನು ಓದಲು ಬೇಕು ಬೋಧ ತತ್ವ ತಿಳಿಯಲು ಬೇಕು

ಮಾಧವನ ಸ್ಮರಣೆ ಮಾಡಲು ಬೇಕು ನರನಾದ ಮೇಲೆ


ಚರಣ 5


ತಂದೆ ಕೃಷ್ಣನ ದಯ ಪಡೆಯ ಬೇಕು ಬಂದದ್ದುಂಡು ಸುಖಪಡ ಬೇಕು

ಚೆಂದಾಗಿ ಜಗದೊಳಗಿರ ಬೇಕು ನರನಾದ ಮೇಲೆ

***

pallavi


harinAma jihvayoLira bEku naranAdamElE


caraNam 1


bhUta dayAparanAgira bEku pAtakavellava kaLeyali bEku

mAtu mAtige hari ena bEku naranAdamElE


caraNam 2


shAnti samadama hiDiyalu bEku bhrAnti avaguNava kaLeyalu bEku

santata sanmArgadalira bEku naranAdamElE


caraNam 3


kAma krOdhavatA biDa bEku mamate ahankArava nIgalu bEku

saumyara sangadoLira bEku naranAdamElE


caraNam 4


vEda shAstravanu odalu bEku bOdha tatva tiLiyalu bEku

mAdhavana smaraNe mADalu bEku naranAdamElE


caraNam 5


tande krSNana daya paDeya bEku bandadduNDu sukhapaDa bEku

cendAgi jagadolagira bEku naranAdamElE

***

No comments:

Post a Comment