ankita ಮಂಗಳಾಂಗಹರಿವಿಠಲ
ರಾಗ: ಧನ್ಯಾಸಿ ತಾಳ: ಏಕ
ಆರತಿ ಬೆಳಗಿರೆ ರಾಜರಿಗೆ ರಾಜರಿಗೆ ಯತಿರಾಜರಿಗೆ ಪ
ರಾಜರಿಗೆ ಗುರುರಾಜರಿಗೆ ಅ.ಪ
ರಕ್ಕಸರ ಮಕ್ಕಳಿಗೆ ಅಕ್ಕರೆಯಿಂದಲಿ
ಚೊಕ್ಕ ಭಕ್ತಿಯ ಪೇಳ್ದ ಚಿಕ್ಕ ಪ್ರಹ್ಲಾದಗೆ 1
ಮಧ್ವಮತದ ಮಹಾ ತತ್ತ್ವಗಳೆಲ್ಲವ
ಸದ್ವೈಷ್ಣವರಿಗೆ ಪೇಳ್ದ ಯತಿರಾಜಗೆ 2
ಮಂಗಳವರ ಮಂತ್ರದಂಗಳದೊಳಗೆ
ಮಂಗಳಾಂಗಹರಿವಿಠಲನಕಾಂಬುವಗೆ 3
***
No comments:
Post a Comment