ಕಾಖಂಡಕಿ ಶ್ರೀ ಮಹಿಪತಿರಾಯರು
ನಿಜ ವಸ್ತುನೆ ಮುಂದುಗಾಣಿ ಥಳ ಥಳ ಗುಡುವುತ ಹೊಳೆವುತಲ್ಯದೆ ಬಲಿಯೊ ಸದ್ಗುರು ಸುಪ್ರಾರ್ಥನೆ pa
ಜನ್ಮದ ಸಂದೇಹಗಳೀತೆ ಒಂದಾದರ ಮಾತಿಗಿಳಿಯಿತೆ ನಿಜಘನ ನೆಲೆಗೊಳ್ಳಿತೆ ಹೊಂದಿತೆ ಅರಿಯದಿಹುದು ಒಳಿತೆ1
ನಿನ್ನೊಳು ನೀ ನಿಜ ತಿಳಿಯದೆ ಖೂನ ಇನ್ನೊಬ್ಬರಿಗ್ಹೇಳುವುದೇನ ಕನ್ನಡಿಯೊಳು ಕಾಂಬುವ ಕಾಂಚನ ಸನ್ನಿದಾಗುವದೆ ಪೂರ್ಣ ಭಿನ್ನಭೇದವು ಹೋಗದೆ ಅನುಮಾನ ಚೆನ್ನಾಗ್ಯಾಗುವದೆ ಜ್ಞಾನ ಧನ್ಯಗೈಸುವ ಸದ್ಗುರು ಕರುಣ ಮನ್ನಿಸಿ ಪಡಕೊ ನಿಧಾನ 2
ಮುಗ್ದದಿ ಗುರುಪಾದ ಈಗ ಏನೆಂದು ತಾ ತಿಳಿಯುವದು ಆಗ ಸ್ವಾನುಭವದ ಸ್ವಸುಖಭೋಗ ಅಣುರೇಣುದೊಳಗ ತಾ ಬ್ಯಾಗ ದೀನ ಮಹಿಪತಿಗದೆ ಒಳಹೊರಗೆ ಫನ ಭಾಸುತಲ್ಯದೆ ಆವಾಗ 3
****
No comments:
Post a Comment