Wednesday, 8 December 2021

ಒಂದು ಪಥವ ಹೊಂದಲರಿಯರೀ ಮನುಜರು ಇಂದಿರೇಶನ ankita mahipati ONDU PATHAVA HONDALA MANUJARU INDIRESHANA



 ಕಾಖಂಡಕಿ ಶ್ರೀ ಮಹಿಪತಿರಾಯರು

ಒಂದು ಪಥವ ಹೊಂದಲರಿಯರೀ ಮನುಜರು ಇಂದಿರೇಶನ ಪಾದವ ಕಾಣದೆ ಕೆಡುವರು p


ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು ಒಂದರೆ ಘಳಗಿ ಪ್ರಾಚೀನವೆಂಬರು ಒಂದರೆ ಘಳಗಿ ಈಶ್ವರ ಸೂತ್ರವೆಂಬರು ಒಂದರೆ ಘಳಗಿ ತಾ ಏನೋ ಎಂತೆಂಬರು 1 

ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು ಖರೆ ಎಂಬರು ಒಮ್ಮೆ ಸುಷುಪ್ತ್ತಿಯೊಳಿದೇ ಸತ್ಯವೆಂಬರು ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು 2 

ಒಂದು ತಿಳಿದರ ಸಕಲವು ಒಂದಾಗಿ ದೋರುವದು ಒಂದರೊಳಗ ಸಕಳ ದೊರೆಕೊಂಬುದು ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ ತಂದೆ ಸದ್ಗುರು ಭಾಸ್ಕರ ಕೋಟಿ ತೇಜನು 3

***


No comments:

Post a Comment