ಗುರು ಮಧ್ವರು
ಮಧ್ವರಾಯರೆಂಬ ಹಕ್ಕಿಯು ಬಂದು
ಮಧ್ವ ಮತ ವೆಂಬ ಹಣ್ಣನೆ ತಂದು
ಮಾಯವಾದಿಗಳೆಂಬ ಸಿಪ್ಪೆಯ ತೆಗೆದು
ಅಪಧ್ಧ ಮತಗಳೆಂಬ ಬೀಜವನೆಸೆದು||ಪಲ್ಲ||
ಜ್ಞಾನಾವೆಂಬ ನೆಲ ಶುಧ್ಧಿ ಮಾಡಿ
ಭಕ್ತಿ ಎನ್ನುವ ಮಣ್ಣನೆ ಹಾಕಿ
ವೈರಾಗ್ಯವೆಂಬ ಗೊಬ್ಬರ ಚಲ್ಲಿ
ಹರಿನಾಮವೆಂಬ ನೀರನೆ ಹಾಕಿ||೧||
ವಂಚನಿಲ್ಲದಲೇ ಸಸಿಯನ್ನ ನಾಟಿ
ಸಂಚಿತಾಗಮದ ಕಂಚಿಕೆನಿಟ್ಟು
ಚಂಚಲವೆಂಬ ಹಕ್ಕಿಯ ಹೊಡೆದು
ಮುಂಚೆಯೆ ಕಸದ ಕಡ್ಡಿಯ ತೆಗೆದು||೨||
ಪವನನು ಎಂಬ ಗಾಳಿಯು ಬೀಸಲು
ದಿವಕರನಿಂದ ರಶ್ಮಿಯು ಬೀಳಲು
ಮಧ್ವಮತವೆಂಬ ಮಾಗಿದ ಹಣ್ಣಿಗೆ
ಮಧ್ವೇಶಕೃಷ್ಣ ನು ಕಾವಲಿರುವನು||೩||
~~~~~~~ಹರೇ ಶ್ರೀನಿವಾಸ
***
No comments:
Post a Comment