ರಾಗ: [ದರ್ಬಾರಿ ಕಾನಡ] ತಾಳ: [ಆದಿ]
ರಾಜರ ನೋಡಿದಿರಾ ಗುರುರಾಜರ ನೊಡಿದಿರಾ ಪ
ರಾಜರ ನೊಡಿ ಭಕುತಿಯ ಮಾಡಿ
ಗೋಜನ ಕರುಣಕೆ ಭಾಜನರಾದೀರಾ ಅ.ಪ.
ತುಂಗಮಹಿಮರು ನರಸಿಂಗ ಭಕ್ತರು
ಭಂಗರಹಿತರು ಸುರಸಂಘಮಾನಿತರು 1
ಯೋಗಿವರ್ಯರು ಬಹು ತ್ಯಾಗಶೀಲರು
ರಾಗಶೂನ್ಯರು ಭವರೋಗವೈದ್ಯರು 2
ತಂತ್ರಮಲ್ಲರು ಬಹುಗ್ರಂಥಕರ್ತೃಗಳು
ಮಂತ್ರಸಿದ್ಧರು ಮಹಂತಮಠದವರು 3
ಶಾಂತಮೂರ್ತಿಗಳು ವೇದಾಂತಬಲ್ಲವರು
ದಾಂತಶೇಖರರು ಏಕಾಂತಭಕ್ತರು 4
ರಾಘವೇಂದ್ರರು ಇವರೆ ವ್ಯಾಸರಾಜರು
ಭಾಗ್ಯವಂತರು ಪ್ರಹ್ಲಾದರಾಜರು 5
ದೂಡು ಸಂಶಯಾ ನೀ ಮಾಡು ಭಕುತಿಯಾ
ಬೇಡು ಬಯಕೆಯಾ ಪೋಗಾಡು ದುಃಖವಾ 6
ಸೃಷ್ಠಿನಾಯಕಾ ಶ್ರೀಕೃಷ್ಣವಿಠಲನ
ಶ್ರೇಷ್ಠಭಕ್ತರೂ ಸಂತುಷ್ಠಿ ನೀಡುವರು 7
***
No comments:
Post a Comment