ರಾಗ: ಕಾಂಬೋಜಿ ತಾಳ: ಝಂಪೆ
ಆವ ಗುರುಗಳಿಗುಂಟು ಈ ವೈಭವವು
ಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದೆಲೆ ಪ
ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿ
ತರಣಿಯಂದದಿ ಮೆರೆದು ಭಕ್ತರನು ಪೋಷಿಸುವ
ಶರಣರಕ್ಷಕನೆಂಬ ಬಿರುದಿಂದ ತಾಮೆರೆವ
ವರ ಮಧ್ವಕುಲಚಂದ್ರ ಗುರುರಾಜಗಲ್ಲದೇ 1
ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದು
ಕಂತುಪಿತನಭಕ್ತ ಚಿಂತೆಯನ್ನು ಹರಿಸೆಂದು
ಸಂತತವು ಬೇಡುತಿಹ ಶಾಂತರಾಗಿಹ ಜನರ
ಸಂತೋಷದಲಿ ಕಾಯ್ವ ಗುರುರಾಜಗಲ್ಲದೇ 2
ಕಾವಿವಸ್ತ್ರವಧರಿಸಿ ಕವಿದ ಭ್ರಮೆಯನು ಬಿಡಿಸಿ
ಭುವಿಜರಮಣನ ಭಜಪ ಕವಿಕುಲೋತ್ತಮ ನಮ್ಮ
ಸೇವಕರ ಸುರಧೇನು ಪಾವನಾತ್ಮನು ಆದ
ಕೃಷ್ಣವಿಠಲನಭಕ್ತ ಗುರುರಾಜಗಲ್ಲದೆ 3
***
No comments:
Post a Comment