ರಾಗ: ಶಹನ ತಾಳ: ಆದಿ
ಗುರುವೆ ನಿಮ್ಮ ಕರುಣ ಕವಚವೆನಗಿರಲಿ ಪ
ಮೆರೆದು ಎನ್ನಪರಾಧಗಳ ಪೊರೆಯೋ ಕರುಣಿ ಅ. ಪ
ಭಾಗವತರಪ್ರಿಯಾ ಕರುಣಾಸಾಗರ
ನಾಗಶಯನನ ಪಾದಪದುಮ ಭ್ರಮರ
ವಾಗ್ದೇವಿಯ ಪ್ರೀತಿಯ ವರಕುವರ
ವಾಗ್ವಿಲಾಸದ ನಿಮ್ಮ ಪರಿಮಳ ಅಮರ 1
ಪಂಚಪ್ರಾಣನು ನಮ್ಮ ಪೊರೆವಂತೆ ಬೇಡಿ
ಸಂಚಿತಾಗಾಮಿಗಳ ಕಳೆವಂತೆ ಮಾಡಿ
ಕೊಂಚ ಮಾಡುತ ಪ್ರಾರಬ್ಧವನುಣಿಸಿ
ಪಂಚಬಾಣನಯ್ಯನ ಕರುಣೆಯಕೊಡಿಸಿ 2
ಎಣೆಯಿಲ್ಲದ ಭವನೀಗಿಸೊ ಗುರುವರ
ಮೇಣ್‍ಕರ್ಮದ ಕಟ್ಟಬಿಡಿಸೊ ಭಕ್ತಾರಾಧಾರ
ಬಣ್ಣಿಸಲಳವೆ ಮಹಿಮೆ ನಿಮ್ಮದಪಾರ
ಚಿಣ್ಣಶ್ರೀಕೃಷ್ಣವೇದವ್ಯಾಸವಿಠಲ ಪ್ರಿಯಕರ 3
***
No comments:
Post a Comment