Monday, 6 September 2021

ಯತಿಯಾಗಿ ಕುಳಿತಿಹರು ಪ್ರಹ್ಲಾದರಾಜರು ಯತಿಯಾಗಿ ಕುಳಿತಿಹರು ankita janakiramana

ankita janakiramana

ರಾಗ: ಶಂಕರಾಭರಣ   ತಾಳ: ಅಟ

ಯತಿಯಾಗಿ ಕುಳಿತಿಹರು ಪ್ರಹ್ಲಾದರಾಜರು

ಯತಿಯಾಗಿ ಕುಳಿತಿಹರು 


ಸೀತಾರಾಮರಪಾದ ಆಹ್ಲಾದಿಂ ಪೂಜಿಸಲು  ಅ. ಪ


ಕೃತಯುಗದಿ ಹಿರಣ್ಯಕನ ಪುತ್ರನಾಗಿ ಜನಿಸಿ

ನಿತ್ಯ ಶ್ರೀಹರಿಯನ್ನು ಹಿತದಿಂದ ಭಜಿಸಿ

ಪಿತನಿಂದ ಕಷ್ಟಪಟ್ಟು ರತಿಪತಿಪಿತನನ್ನು 

ಸ್ತುತಿಸಿ ಕಂಭದಿ ತೋರಿದ ಭಕ್ತಪ್ರಹ್ಲಾದರು  1

ತ್ರೇತ ದ್ವಾಪರದಲ್ಲಿ ಭೂತಳದಲಿ ಜನಿಸಿ

ಪ್ರೀತಿಯಿಂದಲಿ ರಾಮಕೃಷ್ಣರ ಭಜಿಸಿ

ಅತ್ಯಧಿಕ ಪದವಿಯ ಪ್ರತಿಯಾಗಿ ಪೊಂದಿದ

ಭಕ್ತವಿಭೀಷಣ ಬಾಹ್ಲೀಕರಾಜರು  2

ಕಲಿಯುಗದಲಿ ಹರಿಯ ಮಹಿಮೆಯ ಪೊಗಳಲು

ಬಲವಾಗಿ ಮರುತಮತಮಾರ್ಗವ ಪಿಡಿದು

ಮೇಲಾಗಿ ಜಾನಕಿರಮಣನ ಪೂಜಿಪ

ಚೆಲುವಮೂರುತಿ ಶ್ರೀ ರಾಘವೇಂದ್ರರೆಂಬ  3

***

 

No comments:

Post a Comment