..
ಜಯಾ ಜಯಾ ಪ
ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ
ಈ ಬಿಲ್ಲು ಈ ಬಾಣ ನಿಂತಭಾವ 1
ಈ ತನು ಈ ರಾಣಿ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಮೂಲೋಕದೊಳಗೆ 2
ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ
ಜಯ ದನುಜವಿದಾರಣ ಜಯ ತಮಹರಣ 3
ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ
ಸುರರ ಮೊರೆಯನು ಕೇಳ್ದು ನರರೂಪ ತಾಳ್ದು 4
ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ
ಮನೋರಥ ಕಾಯಿದ ಪುಣ್ಯಚರಿತ್ರ5
ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು
ಮಿಥಿಳ ಪುರದಿ ಹರನ ಧನುವನುರೆ ಮುರಿದು 6
ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ-
ಹಿತÀಳ ಬಲವಂತ ದೇವೋತ್ತುಂಗ ಜಯತು 7
ಭರದಿಂದಲಯೋಧ್ಯಾಪುರವನು ಶೃಂಗರಿಸೆ
ಹರುಷತನದಲಿ ರಾಮಗರಸುತನವೆನಲು 8
ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ
ಸಿರಿಸಹಿತ ಹೊರಹೊಂಟ ಕರುಣಾಳು ಜಯತು 9
ಅನುಜ ಅವನಿಜೆ ಸಹಿತ ವನವಾಸವ ಮಾಡಿ
ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು 10
ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ
ಬಿನುಗು ಹೊಮ್ಮøಗವೆಚ್ಚ ಘನಮಹಿಮ ಜಯತು 11
ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ
ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ 12
ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ
ಎಲ್ಲರನು ತರಿದಂಥ ಬಲ್ಲಿದನೆ ಜಯತು 13
ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ
ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ 14
ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ
ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ 15
***
No comments:
Post a Comment