ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಪ
ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1
ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2
ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
****
No comments:
Post a Comment