..
(ಅ?)ನಿತ್ಯವೆಂಬುದ ಕೇಳು ಜೀವ ಬಲು
ನಿತ್ಯವೆಂಬುದು ಈಗ ಬಾಳುವ ಕಾಯ ಪ.
ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು
ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು ಅ.ಪ.
ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ
ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ
ಹರಿ ಜೀವರೊಳಗೆ ಹೀಗೆ ತಿಳಿದವನು
ಧರೆಯೊಳಗೆಂದೆಂದಿಗು ಕೃತಕೃತ್ಯನು 1
ಹರಿಯೆಂಬೊ ರಾಜಗೆ ಗುರುಮೂರುತಿ ಮಂತ್ರಿ
ಪರಿವಾರ ಇವರಯ್ಯ ಜೀವಂಗಳು
ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ
ಪರಲೋಕದಲಿ ದಿವ್ಯಭೋಗಂಗಳು 2
ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ-
ವೆನ್ನುವುದೆ ಘನ್ನತತ್ವಂಗಳು
ಅನ್ಯಥಾನುಡಿಯಲ್ಲ ಇನ್ನು ಸಂಶಯವಿಲ್ಲ
ಎನ್ನೊಡೆಯ ಹಯವದನ ಬಲ್ಲ 3
***
No comments:
Post a Comment