ರಾಗ: [ಕಾನಡ/ದರ್ಬಾರಿ] ತಾಳ: [ಮಿಶ್ರಛಾಪು]
ಕಂಡೆನಾ ಯತಿರಾಜನಾ
ಪುಂಡರೀಕಾಕ್ಷನ ಪಾದ ಭಜಕನಾ ಪ
ದಂಡ ಕಮಂಡಲ ಧರಿಸಿಹನಾ ಉ-
ದ್ದಂಡರ ವಾದದಿ ಗೆಲಿದಿಹನಾ
ತಂಡತಂಡದಿ ಬರುವ ಭಕುತರಾ
ಹಿಂಡು ಪಾಪವ ತರಿದು ಪೊರೆವನಾ 1
ಕಾಷಾಯ ವಸನ ವಿಭೂಷನಾ ವಿ-
ಶೇಷ ಮಹಿಮೆಯಿಂದ ಮೆರೆಯುವನಾ
ವಾಸುಕಿ ಶಯನನ ನಿಜದಾಸನನಾ
ಭೂಷಿತ ಮಂತ್ರನಿಲಯನಾಥನಾ 2
ಕರಿವರದನ ದಿವ್ಯ ದಯವ ಪಡೆದನಾ
ವರತುಂಗ ತೀರದಿ ರಾಜಿಪನಾ
ಗುರುಶಾಮಸುಂದರನ ನಿಜವರ ಭಕ್ತನಾ
ಗುರುಸಾರ್ವಭೌಮನ ಕನಸಲಿ ನಿಜವಾಗಿ 3
***
No comments:
Post a Comment