Wednesday, 1 September 2021

ಹರುಷದಿಂದಲಿ ಮನವೇ ಭವ ಜಲದಿಂದಲಿ ದಾಟಿಸುವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹರುಷದಿಂದಲಿ ಮನವೇ | ಪ 


ಭವ ಜಲದಿಂದಲಿ ದಾಟಿಸುವನು ಕಣ್ಣವರಿಸುತಲಿದ್ದು|ಅಚ್ಯುತಾನಂತ ಹರಿ| ಯನ್ನದೆವೆ ಕಂಡ ಚಿಂತೆಯನು ಮಾಡಿ| ಬನ್ನ ಬಡುತಲಿ ಉದರ|ಧಾವತಿಯವಳಗಾಗಿ| ದಣ್ಣನೇ ದಣಿದು ಬಂದು ಬಯಿಗೋರಗುವೇ 1 

ಬಳ್ಳಿನೊರಳಗ ತೊಡರಿದ|ಕಾಲಿನಂತೆ ಭವಾ ತಳ್ಳಿಯೊಳುಸಿಲ್ಕಿ ಬಳಲುತಾ ಗುಂದುತಾ| ನಿಲ್ಲದೆವೆ ತಿರುಗುತಿಹೆ ಸಾಧು ಸಂಗಕಬರಲು ಯಳ್ಳಿಸಿತು ಅವಕಾಶ ಕಾಣೆ ನಾನು 2 

ಕೆರೆಯ ನೀರನು ಕೆರೆಗೆ ಚೆಲ್ಲಿ|ವರವಪಡಿಯಲಿಕ್ಕೆ ಭರದಿಂದ ಬಂದ ಅಲತ್ಯ ನೋಡ್ಯಾ| ಹರಿನಾಮ ಹರಿಗರ್ಪಿಸಿ ಗತಿ ಪಡಿಯಲೊಲ್ಲಿ ಹರ ಹರಾ ನಿನಗೆಂತು ಮತಿ ವದಗಿತೋ 3 

ಹಾಡಿ ಕೊಂಡಾಡಿದರ ಹರಿನಾಮ ನಾಲಿಗ್ಗೆ ಬಾಡಿಗೆಯು ಬೀಳುವದೋ ನಾನರಿಯೆ ನೋ ಮೂಢ ಪಾಮರನೆಮರ ಹುಟ್ಟಿ ಮರಬಿದ್ದಂತೆ ನೋಡು ನರ ದೇಹದಲಿ ಬಂದಾಯಿತು 4 

ಹಿಂದಿನಪರಾಧಗಳಯೇನಾದರಾಗಲಿ ಮುಂದೆ ಇನ್ನಾರ ಸ್ವಹಿತ ವಿಚಾರಿಸೋ ತಂದೆ ಮಹಿಪತಿಸ್ವಾಮಿ ದ್ವಂದ್ವ ಚರಣಕ ಹೊಂದಿ ಇಂದಿರೇಶನ ವಲಮೆ ಪಡೆದು ಸುಖಿಸೋ 5

***


No comments:

Post a Comment