Wednesday, 1 September 2021

ಹಳೆಯದಾಯಿತು ಕಾಯಾ ಇನ್ನಾರೇ ತಿಳಿ ಸ್ವಹಿತೋಪಾಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹಳೆಯದಾಯಿತು ಕಾಯಾ ಇನ್ನಾರೇ | ತಿಳಿ ಸ್ವಹಿತೋಪಾಯಾ ಪ 


ಬಾಲಕನಾಗಿ ಕೆಲವು ದಿನ ಕಳೆದೀ | ಮೌಲ್ಯ ಯೌವ್ವನದಲಿ ಉನ್ಮತ್ತನಾದಿ 1 

ಸಡಿಲುತ ಬಂದವು ಅಂಗಮಾಟಗಳು | ವಡಮೂಡದು ವಿವೇಕ ಬುದ್ಧಿಗಳು 2 

ಮಂಡೂಕ ಸರ್ಪ ನೋಡದೆ ಭರದಿ | ಅಂಡಲುವದು ನೊಣಕದೇ ಪರಿಯಾದಿ 3 

ಏನಾದರಾಗಲಿ ಹಿಂದಿನ ಕರಣೆ | ಜ್ಞಾನದೆಚ್ಚರ ಹಿಡಿ ಮನದೊಳು ಪ್ರಾಣಿ 4 

ಗುರುವರ ಮಹಿಪತಿ ನಂದನ ಪ್ರಿಯನಾ | ಅರಿತರೆ ಬಂದದೆ ಸಾರ್ಥಕ ಖೂನಾ 5

***


No comments:

Post a Comment