Wednesday, 1 September 2021

ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿಲಿಸಯ್ಯಾ ನಿಲಿಸೆನ್ನ ಮನವ ಶ್ರೀ ಹರಿಯೇ ನಿನ್ನಾ | ಹೊಳೆವ ಚರಣದಲ್ಲಿ ನೆಲೆಗೊಂಬುವಂದದಿ ಪ 


ಯರಳಿಯು ಘಂಟಾನಾದಕೆ ಬಲೆ ಹೋಗುವಂತೆ | ಮರುಳಾಗಿ ತರಣಿಯರಾಳಾಪದಿ | ಭರದಿಂ ದೀವಿಗೆ ಕಂಡು ಪತಂಗ ಮಡಿವಂತೆ | ಹರಿದು ರೂಪ ವಿಷಯದಲಿ ಮುಗ್ಗುತಿಹುದೋ1 

ಕರಿ ಅಂಗ ಸಂಗದೀ ಕುಣಿಯಾ ಬೀಳುವಂತೆ | ಸ್ಪರುಶ ವಿಕ್ಷಯದಲಿ ಮೈಮರೆದು | ಯರಗಿ ಮಾಂಸಕ ಗೋಣ ನೀವ ಮಚ್ಛದಂತೆ | ನಿರುತ ಜಿವ್ಹಾಸ್ವಾದಕ ತೊಳಲುತಲಿಹುದೈಯ್ಯಾ2 

ಪರಿಮಳಕಾಗಿ ಬ್ರಮರ ಸೆರೆ ಬಿದ್ದಂತೆ | ಹರುಷ ಪಡುತ ಭೋಗ ದ್ರವ್ಯದಲಿ | ತರುವರಿ ತನಲಿಂತು ಮಾಡಿ ವಿಷಯದಿ ಬಂದು | ದುರಿತ ಮೊನೆಗೆಯನ್ನ ಗುರಿ ಮಾಡಿತಿಹುದೈಯ್ಯಾ3 

ಐದು ಮೋರೆಯಲಂತು ಹರಿಗುಡದೆವೆ ಮತ್ತ | ಐದು ಪರಿಯ ಕಾವಲಿಯ ನಿರಿಸೋ | ಮಾಧವ ನಿಮ್ಮ ಸತ್ಕಥೆಗಳ ಶ್ರವಣಕ | ಪಾದ ಧ್ಯಾನದಿ ಹಿಂಗದಂದದಿ ನಯನದಿ 4 

ನಿನ್ನ ದಾಸರ ಸಂಗ ವನುದಿನ ದೇಹಕ | ನಿನ್ನ ನಾಮಾಮೃತ ಜಿವ್ಹೆಯಲಿ | ನಿನ್ನ ನಿರ್ಮಾಲ್ಯ ತುಳಸಿಯಾ ಫ್ರಾಣಿಸುವ ತಾ | ಯನ್ನನುದ್ದರಿಸು ಮಹಿಪತಿ ಸುತ ಪ್ರಭುವೆ5

***


No comments:

Post a Comment