Wednesday 1 September 2021

ಧನ್ಯ ಧನ್ಯಾ ಜಗದೊಳವನೇ ಧನ್ಯ ಧನ್ಯಾ ಧನ್ಯ ಧನ್ಯ ಅವ ತನ್ನೊಳು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಧನ್ಯ ಧನ್ಯಾ | ಜಗದೊಳವನೇ | ಧನ್ಯ ಧನ್ಯಾ | ಧನ್ಯ ಧನ್ಯ ಅವ ತನ್ನೊಳು ಸ್ವಹಿತದ | ಕಣ್ಣದೆರೆದು ಗುರುವಿನ್ನರಿತಿಹ ನಿಜ | ಸಣ್ಣ ದೊಡ್ಡದರೊಳು ಘನ್ನವ ನೋಡುತಾ | ಮನ್ನಿಸಿ ಶಾಂತಿಯಲಿನ್ನಿಳಿದವನೇ 1 

ವಾದಗಳಳಿದು ಕ್ರೋಧವ ಕಳೆದು | ಸಾಧುರ ಕಾಣುತ ಪಾದಕ ಯರಗುತ | ಮೋದವ ಕುಡುವ ಬೋಧವ ಕೇಳುವ | ಸಾಧನ ನಾಲ್ಕರ ಹಾಧ್ಹಿಡಿದವನೇ 2 

ಎಲ್ಲರಿಗೇ ಕಿರಿದೊಳ್ಳಿತೆನಿಸಿ | ಬಲ್ಲತನದ ಗರ್ವೆಲ್ಲವ ತ್ಯಜಿಸಿ | ಸಿರಿ ಫಲ್ಲನಾಭನ ಪದ | ದಲ್ಲೆವೆ ಮನರತಿ ನಿಲ್ಲಿಸಿದವನೇ 3 

ಹಂಬಡೆಡಂಬಕ ನೊಬ್ಬರಕೂಡದೇ | ಒಬ್ಬರು ಹೊಗಳಿದರುಬ್ಬದೆ ಮನದಲಿ | ನಿಬ್ಬರ ಮಾತಿಗೆ ಉಬ್ಬಸಗೊಳ್ಳದೇ | ಕೊಬ್ಬಿದ ಹಮ್ಮುವ ಲೆಬ್ಬಿಸಿದವನೇ 4 

ಒಂದೇ ನಿಷ್ಠಿಯು ಒಂದೇ ಮಾರ್ಗದಿ | ದಂದುಗ ವೃತ್ತಿಗಳೆಂದಿಗೆ ಹೊಂದದೆ | ತಂದೆ ಮಹಿಪತಿ ನಂದನ ಸಾರಿದ | ಬಂದದ ಸಾರ್ಥಕದಿಂದಿದ್ದವನೇ 5

****


No comments:

Post a Comment