ಕಾಖಂಡಕಿ ಶ್ರೀ ಕೃಷ್ಣದಾಸರು
ನರಹರಿ ಬಂದು ಮೂಡಿದಾ ಶರಣಗದಯವಾ ಮಾಡಿದಾ ಪ
ಛಟ ಛಟ ಶಬ್ಧವ ತೋರುತಾ ಪಟ ಪಟ ತಾರೆಗಳಾರಲು ತಾ 1
ಗುಡ ಗುಡ ಗುಟ್ಟಿಬಾಯಾಳಗಗ್ನಿಯ ಧಡ ಧಡ ಕಿಡಿಗಳನುಗುಳುತಾ ಗಡ ಬಡಿಸಲು ಸಮುದ್ರಗಳೆಲ್ಲವು ಬುಡು ಬುಡು ಗುಳ್ಳೆಗಳೇಳಲು ತಾ2
ಫಳ ಫಳ ಭೂಮಿಯು ಬಿಚ್ಚಿತು ಗಿರಿಗಳು ಹಳ ಹಳ ಕಲ್ಲುಗಳುದುರಿದವು ಭಳ ಭಳ ಭಾಸಮ ಗಡಿಶತ ತೇಜನ ಥಳ ಥಳ ಮಿಂಚುಗಳಾಡಿದವು 3
ಮಾಗ್ಗಿತು ಧನಿಯನು ಕೇಳುತ ಕೇಳವು ಮುಗ್ಗಿತು ಕಂಗಾಣದೆ ಹಲವು ಅಗ್ಗಳ ದೈತ್ಯರು ದೂರದಿ ಬಿಸುಟರು ನುಗ್ಗಾದವು ಅವರಾಯುಧವು 4
ಭವ ಭವ ಸುರಮುನಿ ಇಂದ್ರರು ಇರದೆವೆ ಮುರಿಯನು ಸಾರಿದಿರು ಗುರುವರ ಮಹಿಪತಿ ನಂದನಸಾರಥಿ ಶರಣಿಂದೆನುತಲಿ ಹೊಗಳಿದನು5
****
No comments:
Post a Comment