ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ
ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1
ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2
ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
***
No comments:
Post a Comment