ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೆ ನೋಡಿರೆ ನಂದನ ಕಂದನ| ಆಡುವ ಆಟದ ಘನ ಮಹಿಮೆಯನು| ರೂಢಿಲಿ ಶಿಶುವೆಂದವರ ನುಡಿ ಮಾಡುವ ಬಲುಕುಂದಾ ಪ
ದುರುಳತನವ ಬಲು ಮಾಡಲೈಶೋಧೆಯು| ತರಳನ ಚರಣವ ನೆರೆ ಕಟ್ಟಿದರೆ| ಒರಳವ ನೆಳೆದೊಯ್ದಾ ಭರದಲಿ ಮರಗಳ ನಡ ಮುರಿದಾ 1
ಸಿಕ್ಕಿದ ಗೋವಳನೆನುತಲಿ ಬಾಲೇರು| ಅಕ್ಕರದಲಿ ಹಿಡಿದೆಳೆತರಲವರಾ| ಮಕ್ಕಳ ರೂಪವನು ಆಗುತೆ ಠಕ್ಕಿಸಿ ಹೋಗುವನು2
ತಂದೆ ಮಹಿಪತಿ ನಂದನ ಪ್ರಭುವಿನಾ| ನಂದನ ಲೀಲೆಯ ಹೇಳಲೆನ್ನಳವೇ| ಒಂದಲ್ಲ ಎರಡಲ್ಲ ನೆಲೆಯನು ಇಂದುಧರನೇ ಬಲ್ಲ3
****
No comments:
Post a Comment