ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನ ನೀ ತಿಳಿಯೋ ಮೂಢ ಭೇದಿಸಿ ಗೂಢ ಧನ್ಯಗೈಸುವ ಪ್ರೌಢ ಸದ್ಗುರು ದೃಢ pa
ಬಂದು ಬಂದು ಹೋಪಾದೇನ ಸಾಧಿಸಿದಲ್ಲದೆ ಖೂನ ಸಂಧಿಸಿ ಬೀಳುವುದು ಹೀನ ಜನ್ಮಕೆ ನಾನಾ ಹೊಂದು ಮನವೆ ನೀ ಪೂರ್ಣ ಸದ್ಗತಿ ಸುಖ ಸಾಧನ ಎಂದೆಂದಿಗಾದ ನಿಧಾನ ಸಾಂದ್ರ ಸದ್ಘನ 1
ಮುತ್ತಿನಂಥ ಸುಜನ್ಮ ವ್ಯರ್ಥಗಳೆವುದಧರ್ಮ ಹತ್ತಿಲ್ಯಾದಾನಂದೋ ಬ್ರಹ್ಮ ತಿಳಿಯೋ ನೀವರ್ಮ ಚೆನ್ನೊಬ್ಬಳೆ ಮಾಡೊಮ್ಮ ಕಿತ್ತಿಬಿಸ್ಯಾಡೊ ದುಷ್ಕರ್ಮ ಎತ್ತ ನೋಡಲು ಸಂಭ್ರಮ ಸದ್ಗುರು ಧರ್ಮ 2
ತನ್ನ ತಿಳಿದು ನೋಡೊ ಭಿನ್ನ ಭೇದವೆಂಬುದೀಡ್ಯಾಡೊ ಸನ್ಮತ ಸುಖ ಸೂರ್ಯಾಡೊ ಅನುಮಾನ ಬಿಡೊ ನಿನ್ನೊಳೂ ಮಹಿಪತಿ ನೋಡೊ ಅನುಭವನೇ ಕೊಂಡಾಡೊ ಉನ್ಮತವಾಗಿ ನೀ ಕೂಡೊ ಘನ ಬೆರೆದಾಡೊ 3
****
No comments:
Post a Comment