Wednesday, 1 September 2021

ನೋಡಿದ್ಯಾ ಗುರುರಾಯರ ನೋಡಿದ್ಯಾ ankita gurujagannatha vittala

 ..

ನೋಡಿದ್ಯಾ ಗುರುರಾಯರ ನೋಡಿದ್ಯಾ ಪ


ನೋಡಿದ್ಯಾ ಮನವೆ ನೀನಿಂದು - ಕೊಂ -

ಡಾಡಿದ್ಯ ಪುರದಲ್ಲಿ ನಿಂದು - ಆಹಾ

ಮಾಡಿದ್ಯ ವಂದನೆ ಬೇಡಿದ್ಯ ವರಗಳ

ಈಡು ಇಲ್ಲದೆ ವರ ನೀಡುವೊ ಗುರುಗಳ ಅ.ಪ


ಸುಂದರ ತಮ ವೃಂದಾವನದಿ ತಾನು

ನಿಂದು ಪೂಜೆಯ ಕೊಂಬ ಮುದದಿ - ಭಕ್ತನೀ

ನಂದ ನೀಡುವೆನೆಂದು ತ್ವರದಿ ಇಲ್ಲಿ

ಬಂದು ನಿಂತಿಹನು ಪ್ರಮೋದಿ ಆಹಾ

ಹಿಂದಿನ ಮಹಿಮವು ಒಂದೊಂದೆ ತೋರುವಾ

ಮಂದಜನರ ಹೃ - ನ್ಮಂದಿರಗತರನ್ನ 1


ದೂರದಿಂದಲಿ ಬಂದ ಜನರ - ಮಹ

ಘೋರ ವಿಪತ್ಪರಿಹಾರಾ - ಮಾಡಿ

ಸಾರಿದಭಿಷ್ಟವು ಪೂರಾ - ನೀಡಿ

ಪಾರುಮಾಡುವ ತನ್ನ ಜನರಾ - ಆಹಾ

ಆರಾಧಿಸುವರ ಸಂ -ಸಾರವಾರಿಧಿಯಿಂದ

ದೂರಯೈದಿಸಿ ಸುಖ ಸೂರಿ ಕೊಡುವೊರನ್ನ 2


ನಿತ್ಯನೇಮದಿ ತನ್ನ ಪಾದ - ಯುಗ

ಸತ್ಯಪೂರ್ವಕದಿ ನಂಬೀದ - ನಿಜ

ಭೃತ್ಯನಪೇಕ್ಷಮಾಡೀದ - ಕಾರ್ಯ

ಸತ್ಯಮಾಡುವ ಪೂಜ್ಯಪಾದ - ಆಹಾ

ಮತ್ರ್ಯಾದಿ ಸುರರೊಳು - ಎತ್ತ ನೋಡಿತಗಿನ್ನು

ಉತ್ತುಮರಾರಯ್ಯ - ಭತ್ಯವತ್ಯಲರನ್ನ 3


ಅಂತರದಲಿ ತಾನು ನಿಂತು ಜನ

ಸಂತತ ಕಾರ್ಯಗಳಿಂತು - ಮಾಡಿ

ಕಂತುಪಿತಗೆ ಅರ್ಪಿಸ್ಯಂತು ತಿಳಿಸ

ದಂತೆ ಎಮ್ಮೊಳಗಿರೊವೊ ತಂತು - ಆಹಾ

ಸಂತತ ಕರ್ಮಗಳಂತು ಮಾಡುತ ಜೀವ

ರಂತೆ ಗತಿಯು ತಾ ಪ್ರಾಂತಕ್ಕೆ - ನೀಡುವರ 4


ಅಗಣಿತ ಮಹಿಮವಗಾಧಾ - ಬಹು

ಸುಗುಣನಿಧಿ ಮಹಾ ಭೋಧ - ನಾನು

ಪೊಗಳುವದೇನು ಸಮ್ಮೋದ - ತೀರ್ಥ

ಮೊದಲಾದ ಸುರರ ಪ್ರಮೋದ - ಆಹಾ

ಮೊಗದಿಂದ ಶ್ರೀಗುರು ಜಗನ್ನಾಥ ವಿಠಲ ಸಂ

ಮೊಗನಾದ ಕಾರಣ ಜಗದಿ ಮೆರೆವೊರನ್ನ 5

***


No comments:

Post a Comment