..
ನಂದಪುತ್ರನ ಆಜ್ಞೆಯಿಂದಲುದ್ಧವ ಬ್ಯಾಗ
ಬಂದು ಗೋಕುಲ ಹೊಕ್ಕಾನಂದದಿಂದಲಿ 1
ಬಾಲನ್ವಾರ್ತೆಯ ಕೇಳೆಶೋದ ಗೋಪನು ಕೊಂ-
ಡಾಡಿ ಗುಣಗಳ ಮನಕೆ ತಾಳಿದರ್ಹರುಷವ 2
ಗೋಪಸ್ತ್ರೀಯರು ಮನದ ತಾಪ ಬಿಡದಲೆ ಅಗಲಿ
ಶ್ರೀಪತಿ ಕಾಣದೆ ಸಂತಾಪದಿಂದಿರೆ 3
ಸತಿಯರೆಲ್ಲರು ಗೋಪಿಸುತನ ಪಾಡುತ ದಧಿಯ
ಮಥಿಸಿ ಕದವನೆ ತೆಗೆಯೆ ರಥವ ಕಂಡರು 4
ದಾವ ಕಾರಣ ನಮ್ಮ ಭಾವಭಕ್ತಿಗೆ ಸ್ವಾಮಿ
ತಾನೆ ಬಂದಾನೋ ತನ್ನಕ್ರೂರನ ಕಳಿಸ್ಯಾನೊ 5
ಭದ್ರೆರೆಲ್ಲರೂ ಕೂಡಿ ಎದ್ದು ಬರುತಿರೆ
ಮಧ್ಯಮಾರ್ಗದಿ ಅಲ್ಲುದ್ಧವನ ಕಂಡರು 6
ಕಾಂತೇರೆಲ್ಲರು ಕೂಡೇಕಾಂತ ಸ್ಥಳದಲ್ಲಿ
ನಿಂತು ಕಂತುನಯ್ಯನು ಲಕ್ಷ್ಮೀಕಾಂತ ಕ್ಷೇಮವೆ 7
ಇಂದಿರೇಶನ ಬಿಟ್ಟಗಲಿ ವ್ರಜದೊಳು ಕಾಲ
ಹಿಂದೆ ಕಳೆವೋದ್ಹ್ಯಾಗಿನ್ನ ್ಹಗಲು ಇರುಳನೆ 8
ಮುಂದೆ ಕಾಣದೆ ನೇತ್ರ ಅಂಧಕರಂದದಿ ಮು-
ಕ್ಕುಂದನಿಂದಲಿ ರಹಿತರೆಂದಿಗಾದೆವೊ 9
ತೊಡಿಗೆ ಬಂಗಾರ ಶಿರದಿ ಮುಡಿವೊ ಮಲ್ಲಿಗೆ ದೇಹ-
ಕ್ಕುಡಿಗೆ ಭಾರವೊ ಬಿಟ್ಟು ಪೊಡವಿಗೊಡೆಯನ 10
ಕೇಳೊ ಉದ್ಧವ ನಾವು ಜಾಳು ಸ್ತ್ರೀಯರು ಒಲ್ಲದೆ
ಕಾಳಿಮರ್ದನ ಕಾಲಲೊದ್ದು ಪೋದನು 11
ಜಾರಸ್ತ್ರೀಯರುಯೆಂದು ನಗದಿರುದ್ಧವ
ಬಿಗಿದ ಮೋಹಪಾಶದಿ ಈ ವಿಚಾರ ಮಾಡಿದ 12
ಬಲೆಯಗಾರಗೆ ಸಿಕ್ಕು ಬಳಲಿದಾಕ್ಷಣ ಅದರ ಕೊ-
ರಳ ಕೊಯ್ಯದೆ ಅವಗೆ ಕರುಣ ಬರುವುದೆ 13
ಎಷ್ಟು ಹೇಳಲೊ ಅವನ ಗಟ್ಟಿಯೆದೆಗಳ ಒಲ್ಲದೆ
ಬಿಟ್ಟು ನಮ್ಮನು ಮಧುರಾಪಟ್ಟಣ ಸೇರಿದ 14
ಭ್ರಮರಕುಂತಳೆ ಒಂದು ಭ್ರಮರಕಾಣುತ ಬ್ಯಾಡ
ಕಮಲನಾಭನ ವಾರ್ತೆ ಕಿವಿಗೆ ಸೊಗಸದು 15
ಮದನಮೋಹನ ಹೋಗಿ ಮಧುರಾಪುರಿಯಲಿ ಅಲ್ಲಿ
ಚÉದುರೆರಿಂದಲಿ ಅವಗೆ ಸೊಗಸು ಸಮ್ಮತ 16
ಕ್ರೂರನೆನ್ನದೆ ಇವಗಕ್ರೂರನೆನುತಲಿ
ದಾರ್ಹೆಸರಿಟ್ಟರೋ ನಮಗೆ ತೋರಿಸೊ ಅವರನು 17
ಯಾತಕ್ಹೇಳುವಿ ಅವನ ವಾರ್ತೆ ಸೊಗಸದು ಹರಿಯು
ಪ್ರೀತಿ ವಿಷಯನು ನಮಗೆ ಘಾತಕನೆನಿಸಿದ 18
ಜಲನ ಭೇದಿಸಿ ಹಯನ ಕೊಂದು ವೇದವ ಹ್ಯಾಗೆ
ಸೆಳೆದ ನಮ್ಮನು ಮನಸು ಹರಣ ಮಾಡಿದ 19
ಕ್ಷೀರ ಮಥನವ ಮಾಡಿ ಸ್ತ್ರೀಯರೂಪದಿಂದಸುರರ
ಮೋಹಿಸಿದ್ವಂಚನೆ ನಮಗೆ ಪೂರ್ಣ ತಿಳಿಸಿದ 20
ಭೂಮಿ ಬಗಿದನು ತನ್ನ ಕ್ವಾರೆಯಿಂದಲಿ
ನಮ್ಮನ್ನು ಸೀಳಿ ಪೋದರೆ ಇನ್ನೀ ಘೋರ ತಪ್ಪುವುದು21
ಕಂದ ಕರೆಯಲು ಕಂಬದಿ ಬಂದು ಸಲಹಿದನೆಂದು
ನಂಬಿ ಕೆಟ್ಟೆವೊ ಇನ್ನಿವನ ಹಂಬಲ ಸಾಕಯ್ಯ 22
ಕೊಟ್ಟ ದಾನವ ಬಲಿಯ ಕಟ್ಟಿ ಪಾಶದಿಂದವನ
ಮೆಟ್ಟಿದ ಪಾತಾಳಕಿಂಥಾಕೃತ್ಯಮರುಂಟೇನೊ 23
ಕೊಡಲಿ ಕೈಯ್ಯೊಳು ಪಿಡಿದು ಹಡೆದ ಮಾತೆಯ ಶಿರವ
ಕಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 24
ಬಂದ ಸತಿಯಳ ಮೋರೆ ಅಂಗ ಕೆಡಿಸಿದ ತ-
ನ್ನಂಗನೆ ಕಾಣದೆ ತಿರುಗಲೆಮಗೆ ಸನ್ಮತ 25
ಪತಿಯ ಸುತರನೆ ಬಿಟ್ಟೆವಶನ ವಸನವ
ಅಗಲಿದ್ವಸುನಂದನಗೆ ನಮ್ಮೆಲ್ಲರುಸುರು ಮುಟ್ಟಲ್ಯೊ 26
ಬೌದ್ಧರೂಪದಿ ಸ್ತ್ರೀಯರ ಲಜ್ಜೆಗೆಡಿಸಿದನೆಂಬೊ
ಸುದ್ದಿ ಬಲ್ಲೆವೊ ನಾವಿಲ್ಲಿದ್ದವರುದ್ಧವ 27
ಕಲಿಯ ಮನಸಿರೆ ಇವಗೆ ಕಲ್ಕ್ಯನೆಂಬೋರೊ
ಕತ್ತಿ ಪಿಡಿದ ಪುರುಷಗೆ ನಮ್ಮೊಳು ಕರುಣ ಬರುವುದೆ 28
ಬ್ಯಾಡವೆನುತಲಿ ಅವಗೆ ಬೇಡಿಕೊಂಡೆವೊ
ಗಾಡಿಕಾರನು ನಮ್ಮ ನೋಡದ್ಹೋದನು 29
ನಮ್ಮ ವಚನವ ಹೋಗಿ ಮನ್ನಿಸುದ್ಧವ
ಪನ್ನಂಗಶಯನನ ಪಾದಕ್ಕಿನ್ನು ನಮಿಸೆವೊ 30
ಬಿಟ್ಹ್ಯಾಗಿರುವೊಣೋ ಭೀಮೇಶಕೃಷ್ಣನ ನಮ್ಮ
ದೃಷ್ಟಿಗೆ ತೋರಿಸೊ ಮುಕ್ತಿ ಕೊಡುವೊ ದಾತನ31
***
No comments:
Post a Comment