ಬಾರವ್ವ ಮಹಾಭಾಗ್ಯದಭಿಮಾನಿ
ಶ್ರೀಹರಿ ನಿಜರಾಣೀ ಪ
ಸಾರಿದೆ ನಿನಪಾದನೀರಜಯುಗ ಮನೋ -
ವಾರಿಜದಲಿ ನೀ ತೋರುತ ಲಕುಮಿ ಅ.ಪ
ಅಖಿಲಾಗಮವಿನುತೆ ಎನ್ನಯ ಮಾತೆ ಸಕಲಸುರಗೀತೆ
ನಿಖಿಲಾ ತ್ರಿಜಗದ್ವ್ಯಾಪ್ತೆ ಪ್ರಖ್ಯಾತೆ ಸಂಪತ್ಪ್ರದಾತೇ
ನಖಮುಖ ಮಾತ್ರದಿ ವಿಖನಸಆಂಡದ
ಅಖಿಲವ್ಯಾಪಾರವ ಸುಖದಲಿ ಮಾಡುವಿ 1
ಇಷ್ಟಾರ್ಥವ ಸಲಿಸಿ ಎನ್ನನು ಪೊರೆಯೇ
ಕೊಲ್ಹಾಪುರÀ ಶಿರಿಯೆ
ಅಷ್ಟ್ಟದಾರಿದ್ರÀ್ಯಗಳನು ನೀ ತರಿಯೆ
ಈ ಕ್ಷಣ ಸುಖಸುರಿಯೇ
ಅಷ್ಟಪÀÀದೋದರ ಅಷ್ಟಮೂರ್ತಿನಿನ್ನ
ದೃಷ್ಟಿಯಿಂದ ಮಹಶ್ರೇಷ್ಟನಾಗಿಹನೇ 2
ಕ್ಷೀರಾವಾರಿಧಿಯೊಳು ಸಂಜಾತೆ ಮಾರನ್ನ ಮಾತೆ ಅ -
ಪಾರಾಮಹಿಮಾಳೆ ಸುರಸನ್ನುತೆ ಜಗದೊಳಗೆ ಖ್ಯಾತೆ
ವಾರವಾರಕೆ ದುರಿತಾರಿ ನಿನ್ನಯ ಪೂಜೆ
ಚಾರುಮನದಿ ಮಾಳ್ಪೆ ಧೀರೆ ಉದಾರೆ 3
ಶ್ರೀಶಾನಿಂದಲಿ ಅನಪಾಯಿನಿ ಎನ್ನಾ ಪಾಲಿಸಬೇಕಿನ್ನಾ
ವಾಸವಾಗೆನ್ನಾ ಮನೆಯೊಳಗಿನ್ನಾ ಪಾಲಿಸೆ ಇದನನ್ನಾ
ವಾಸವಾದಿ ಸುರರಾಸೆಯ ಪೂರ್ತಿಸಿ
ಈಶರ ಮಾಡಿದಂತೆ ಈ ಸಮಯದಿ ಎನ್ನ 4
ನಗೆಮೊಗ ಚೆನ್ನೆ ಸುಪ್ರಸನ್ನೆ ಸುರನಿಕರರನ್ನೆ
ಮಗುವಿನ ಮಾತೆಂದು ನಗುತ ನೀ ಇನ್ನೆ
ಬಾ ಬರುವದು ಘನ್ನೆ
ನಗಹರ ಸುರಪನ ಮಗನನ ಸಖ ಗುರು
ಜಗನ್ನಾಥ ವಿಠಲ ಸಮ್ಮೊಗವಾಗಿ ಬೇಗ ನೀ 5
ಶಿರಿದೇವಿ ನಿನ್ನ ಚರಣ ಸರಸಿಜಯುಗಕೆ
ಶಿರದಿ ನಮಿಪೆ ಸತತ ಸರಸಿಜಾಂಬಕೆ
ಸರಿಯಾರು ನಿನಗೀ ಸರಸಿಜಭವಾಂಡದೊಳು
ಸgಸಿಜಾಕ್ಷಗೆ ದೇಶಕಾಲಗಳಿಂದ ಸರಿಯಾಗಿ ನಿತ್ಯದಲಿ
ಪರಿಪರಿಸೇವಾದಿಂದ ಹರಿಯಾ ಮೆಚ್ಚಿಸಿ
ಪರಮಾದರದಿಂದ ಪತಿಗನುಕೂಲ -
ಪರಳಾಗಿ ಸೃಷ್ಟಿಗೆ ಮೂಲಕಾರಣಳೆನಿಸಿ
ಪರಮೇಷ್ಟಿ ಮೊದಲಾದಾನಂತಜೀವರನ್ನ
ಅರಿತು ಯೋಗ್ಯಾಯೋಗ್ಯತೆಯನ್ನನು -
ಸರಿಸಿ ಸೃಜಿಪ ಶಕ್ತಿ ನಿನಗುಂಟು ನೀ
“ಯಂ ಯಂ ಕಾಮಯೆ ತಂ ತಮುಗ್ರಂ ಕೃಣೋಮಿ”
ಎಂತ ಶ್ರುತಿ ಸಾರುತಿದೆ
ಶಿರಿ ನಿನ್ನ ಕಟಾಕ್ಷದಿ ಸಕಲೈಶ್ವರ್ಯಗಳು
ಪರಿಪರಿ ವಿಧದಿಂದ ಒದಗುತಿಪ್ಪವು
ಹರಿಕೃಪೆ ನಿನ್ನೊಳಗೆಂತಿಹುದೋ
ಅರಿಯಾರು ಎಂದಿಗು ಬೊಮ್ಮಾದಿಸುರರು
ನರರೇನು ಬಲ್ಲರಮ್ಮ ನಿನ್ನ ಮಹಿಮೆಯ
ಶಿರಿಮಾನಿ ಎನ್ನ ನೀನು ಕರುಣದಿಂದಲಿ ನೋಡಿ
ಹರಿಮೂರ್ತಿಯನ್ನೇ ತೋರೆ ಹರಿಣಲೋಚನೆ
ಹರಿದಾಸಜನರೊಡೆಯ ಗುರುಜಗನ್ನಾಥವಿಠಲನ್ನ
ಇರವು ತೋರಿಸಿ ಎನ್ನ ಪೊರೆಯಮ್ಮ 6
****
rendered by
shrI Ananda rAo, srIrangam
to aid learning the dAsara pada for beginners
Lyrics:
rAga: madhyamAvati
tALa: Adi
bAravva mahA bhAgyadabhimAni
shrI hari nija rANi |
sAride ninna pAda nIraja yugamano
vArijadali nI tOruta lakumi ||
iShTArthava salisi ennanu poreye kolhApura siriye |
aShTa dAridrayagaLanu nI tariye IkShaNa sukha suriye |
aShTa padOdara aShTa mUrti ninna
dRShTiyinda mahA shREShTa nAgihane || bAravva ... ||
kShira vAridiyoLu sa~njAte mAranna mAte
apAra mahimaLe surasannute jagadoLage khyAte |
vAra vArage duritAri ninneya pUje
cAru manadi mALpe dhIre uddhAre || bAravva ... ||
nage mukha cenne suprasanne sura nikara ranne
maguvina mAtendu naguta nI inne
bA baruvadu ghanne |
naga hara surapana maganana sakha guru
jagannAtha viTThala sammOgavAgi bEga nI || bAravva ... ||
***
No comments:
Post a Comment