1st Audio by Sri. Madhava Rao
ತಾಳು ತಾಳೆಲೋ ರಂಗಯ್ಯ
ನೀ ತಾಳು ತಾಳೆಲೋ ರಂಗಯ್ಯ
ನಾಳೆ ನಮ್ಮನೆಗೆ ಬಂದರೆ ನಿನ್ನ
ಕಾಲ ಕಂಭಕೆ ಕಟ್ಟಿ ಹೇಳುವೆ ಗೋಪಿಗೆ
ದೊರೆಗಳ ಮಗನೆಂಬುದಕೇನೋ ಬಹು
ದೂರದಿ ಮನೆಯ ಪೊಕ್ಕ ಪರಿಯೇನೋ
ದುರುಳ ಬುದ್ಧಿ ನಿನಗೆ ತರವೇನೋ ,ಹಿಂದೆ
ತಿರುಗಿ ಬೇಡ್ಯುಂಡದ್ದು ಮರೆತ್ಯೇನೋ ರಂಗ
ಚಿಕ್ಕ ಮಕ್ಕಳು ಹೋದರು ಎಂದು ನೀ
ಬಂದು ಕಕ್ಕುಲತೆಯ ಮಾಡುವರೇನೋ
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ, ನೀನು
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೋ ರಂಗ
ಕಟ್ಟಿದಾಕಳ ಮೊಲೆಗಳುಂಡು, ಕರು
ಬಿಟ್ಟು ಹೇಳುವುದೇನೇಲೋ ರಂಗ
ಸೃಷ್ಟಿಗೊಡೆಯ ಶ್ರೀ ಪುರಂದರ ವಿಠಲ ನೀ
ಕಟ್ಟಲ್ಲಿ ನಿಂತ ಕಾರಣವೇನೋ ರಂಗ
*******
ರಾಗ ಶಂಕರಾಭರಣ ಆದಿ ತಾಳ (raga, taala may differ in audio)
pallavi
tALu tALelO rangayya nI tALu tALelO rangayya
anupallavi
nALe nammanage bandare ninna kAla kambhake kaTTi hELuva gOpige
caraNam 1
doregaLa maganembudakEnO bahu dUradi maneya pokka pariyEnO
duruLa buddhi ninage taravEnO hinde tirugi bEDyuNDaddu maretyEnO ranga
caraNam 2
cikka makkaLu hOdaru endu nI bandu kakkuladeya mADuvarEnO
sikkida gOpAla hiDi hiDi endare nInu bikki bikki attare biDuvarEnO ranga
caraNam 3
kaTTidAgaLa molagaLuNDu karu biTTu hELuvudEnElO ranga
shrSTi koDEya shrI purandara viTTala nI kaTTalli ninta kAraNavEnO ranga
***
ತಾಳು ತಾಳೆಲೊ ರಂಗಯ್ಯ ನೀ |
ತಾಳು ತಾಳೆಲೊ ಕೃಷ್ಣಯ್ಯ ಪ
ನಾಳೆ ನೀನು ನಮ್ಮ ಮನೆಗೆ ಬಂದರೆ |ಕಾಲಕಂಬಕೆಕಟ್ಟಿಪೇಳುವೆ ಗೋಪಿಗೆಅ.ಪ
ದೊರೆಗಳ ಮಗನೆಂಬುದಕೇನೊ-ಬಹು |ಧುರದಿ ಮನೆಯ ಪೊಕ್ಕ ಪರಿಯೇನೊ ||ದುರುಳತನದ ಬುದ್ಧಿ ಸರಿಯೇನೊ-ನೀನು |ತಿರಿದು ಬೇಡುಂಡದ್ದು ಮರೆತೆಯೇನೊ 1
ಚಿಕ್ಕಮಕ್ಕಳು ಇಲ್ಲವಂತೇನೊ-ನಿನಗೆ |ಕಕ್ಕೂಲಾತಿಯಿಂದಲಿ ನಿನ್ನ ||ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ |ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ 2
ಕಟ್ಟಿದ ತುರುಗಳ ಮೊಲೆಯುಂಡು-ಕರು |ಬಿಟ್ಟ ಕಾರಣವೇನು ಹೇಳೊ ||ಸೃಷ್ಟೀಶ ಪುರಂದರವಿಠಲರಾಯನೆ |ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ? 3

No comments:
Post a Comment