Wednesday, 1 September 2021

ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ankita gopala vittala

 ..

ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ.


ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1


ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2


ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3


ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4


ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5


ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6


ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7

***



No comments:

Post a Comment