Friday 6 August 2021

ಹ್ಯಾಗೆ ಸದ್ಗತಿ ಆಗುವುದೆನಗೆ ಯೋಗಿಗಳ ಒಡೆಯ ಹರಿಯೆ ankita vijayaramachandra vittala

..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಹ್ಯಾಗೆ ಸದ್ಗತಿ ಆಗುವುದೆನಗೆ

ಯೋಗಿಗಳ ಒಡೆಯ ಹರಿಯೆ

ಈಗಾಗಲೆ ತಿಳಿಸಿ ಸಾಗುವಂತೆ ಸಾಧನ

ಬ್ಯಾಗ ಮಾಡಿಕೊ ನಾಗತಲ್ಪನೆ ಪ


ಮೇಲಧಿಕಾರಿಯು ಕೊಂಡಾಡಲು

ಕುಲ ಉದ್ಧಾರವೆಂದು ಹಿಗ್ಗುವೆ

ಮಲಗದಿಕ ಕಲುಷ ಕಂಡಾಗÀಲು

ಅಳುತ ಧರೆಗೆ ಇಳಿವೆನೊ ನಾನು 1


ಶಿಕ್ಷ ರಕ್ಷ ಸಧ್ಯಕ್ಷ ಲಕ್ಷ್ಮೀಪತಿಯೆಂದರಿಯದೆ

ಕುಕ್ಷಿ ಭರಣಕೆ ಯೋಚಿಸುವೆ

ಪಕ್ಷಿವಾಹನನಲ್ಲಿ ಲಕ್ಷ್ಯವಿಲ್ಲದೆ ಬಕ

ಪಕ್ಷಿಯಂತೆ ಧೇನಿಸುವೆ ನಾ 2


ನಷ್ಟ ದೇಹ ಪುಷ್ಟಿಗಾಗಿ ದುಷ್ಟರಿಗೆ ಎನ್ನ

ಕಷ್ಟ ಪೇಳಲು

ದೃಷ್ಟಿಸಿ ನೋಡಿದರೆ ಬೆಟ್ಟ ಮೇಲಿದ್ದಂತೆ ಕಂ

ಗೆಟ್ಟು ಮೊರೆಯಿಸುವೆ 3


ಒಂದು ಲಾಭವಿಲ್ಲದೆ ಮಂದಿ ನೆರಹಿ

ಸಂದಿಗೊಂದ್ಹರಿದ್ಯಾಡಿ

ಸಂದು ಹೋಯಿತÀು ಹೊತ್ತಯೆಂದು ಆಸ್ಥಾನಕೆ

ಮಿಂದು ಬ್ಯಾಗನ್ನ ತಿಂದೋಡುವೆನೊ 4


ಮಾನನೀರ ಚೆಲ್ವಿಕೆಗೆ ಮನಸೋತು

ನೆನೆನೆನೆದು ಬೆಂಡಾಗುವೆ

ಹೀನರಾ ಕೂಡಿಕೊಂಡು ದೀನರಾ ಬಾಯಿಬಡಿದು

ಧನ ಸಾಧಿಸಿದ್ದು ಕೊನೆಗೆ ಸಾಯುವ ನರಗೆ 5


ಉದಯದಲೆದ್ದು ನದಿಗೆ ಪೋಗಿ ನಾ

ಮುದದಿಂದ ಮಿಂದು

ಉದಯಾರ್ಕಗಘ್ಯ ಒದಗೀಸಿ ಕೊಡದ

ಮದಡನಾಗಿದ್ದವಗೆ 6


ವರ ಸುದರ್ಶನ ಗ್ರಂಥಗಳ ಗುರುಗಳಲ್ಲಿ

ನಿರುತ ಪಠಿಸಲಿಲ್ಲ

ಭಾರತ ಭಾಗವತ ಪುರಾಣಗಳು

ಪರಮ ಭಕ್ತೀಲಿ ಕೇಳಲಿಲ್ಲ 7


ಭಾವ ಶುದ್ಧಿಯಿಂದ ದೇವತಾರ್ಚನೆ

ಆವ ಕಾಲಕು ಮಾಡಲಿಲ್ಲ

ಪವನಸಖ ಮಖದೊಳಾಹುತಿನಿತ್ತು

ಕವಿಗಳಿಗನ್ನ ಕೊಟ್ಟವನಲ್ಲ 8


ಧ್ಯಾನ ಮಾಡುವುದನ್ನು ಮೌನಿಗಳ ಕೇಳಿ

ಮನನ ಮಾಡಲಿಲ್ಲ

ಸನಕಾದಿ ವಂದ್ಯ ವಿಜಯ ರಾಮಚಂದ್ರವಿಠಲ ನಿನ್ನ ಪಾದ

ಕನಸಿನಲಾದರೂ ಒಮ್ಮೆ ನೋಡಲಿಲ್ಲ 9

***



No comments:

Post a Comment