Sunday, 1 August 2021

ದಾಸರಾಯರ ದಿವ್ಯ ಚರಣ ಭಜಿಸಿ ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ankita varadendra vittala

 ..

ವರದೇಶವಿಠಲರ ಹಾಡು


ದಾಸರಾಯರ ದಿವ್ಯ ಚರಣ ಭಜಿಸಿ ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ


ದಾಸರಾಯರ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1


ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2


ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3


ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4


ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5


ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6


ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7

***


No comments:

Post a Comment