Sunday, 1 August 2021

ಕಾಯೆ ಕಾಯೆ ಕಾಯೆ ಶ್ರೀ ಮಾರುತಿ ಜಾಯೆ ankita gopalakrishna vittala

ಕಾಯೆ ಕಾಯೆ ಕಾಯೆ ಶ್ರೀ ಮಾರುತಿ ಜಾಯೆ ಪ.


ಸುರಸತಿಯರುಗಳಿಂ

ಪರಿಪರ ಓಲಗ

ಹರುಷದಿ ಕೈಗೊಂಬ

ಮರುತನ ಮಡದಿಯೆ 1

ಇಂದಿರೆ ಪತಿಯನು

ತಂದು ತೋರಿಸೆ ಹೃನ್-

ಮಂದಿರದಲಿ ಬೇಗ

ಸಿಂಧುರಗಮನೆ 2

ಕಾಲ ಕಾಲಕೆ ಮತಿ

ಪಾಲಿಸು ಶ್ರೀಗೋ

ಪಾಲಕೃಷ್ಣವಿ

ಠ್ಠಲನ ಸೊಸೆಯೆ ನೀ 3

***


No comments:

Post a Comment