Monday, 2 August 2021

ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ ankita uragadrivasa vittala

 ತತ್ವಸುವಾಲಿ

ಓಂಕಾರ ಪ್ರತಿಪಾದ್ಯ ಶ್ರೀಕಾಂತನೇ ನಿನ್ನ

ಏಕಾಂತ ಭಕ್ತರಾಸಂಗವಾ-ಸಂಗವ ಕೊಟ್ಟು ಭವ

ಭಂಗವ ಗೈಸಿ ಶುಭಾಂಗನೆ ಕಾಯಯ್ಯ ಶ್ರೀರಂಗ 1

ಕಾಲತÀ್ರಯಕೃತ ವಿಕಾರವಿಲ್ಲದೆ ನೀನೆ

ಮೂಲರೂಪನೆ ಬಹು ರೂಪ-ಬಹುರೂಪ

ಸ್ವಗತಭೇದ ವಿವರ್ಜಿಕನೆ ಸಲಹಯ್ಯ 2

ಆವಕಾಲಕು ನೀನೆ ಚತುರ ರೂಪದೊಳಿದ್ದು

ಜೀವ ನಿಯಾಮನು ನೀನಾಗಿ-ನೀನಾಗಿ

ತಿಳಿಸುವೆ ವಿಶ್ವ ತೈಜಸ ಪ್ರಾಜ್ಞ ತುರ್ಯಾತ್ಮ3

ಸಪ್ತಾಂಗ ಏಕೋ ನ ವಿಂಶತಿ ಮುಖನಾಗಿ

ಇಪ್ಪೆ ನೀ ಬಲಗಣ್ಮನೆಯೊಳು-ಮನೆಯೊಳು

ಸ್ಥೂಲ ಶುಭ ವಿಷಯಂಗಳಾ ಮಾಡಿ ಉಣಿಸುವೆ 4

ವಿಶ್ವದಲಿ ವ್ಯಾಪಿಸಿಹೆ ವಿಶ್ವನಂಬೋರು ನಿನ್ನ

ನಾಶರಹಿತನೆಂದೂ ನರನೆಂದೂ-ನರನೆಂದೂ

ನಿನ್ನ ವೈಶ್ವಾನರನು ಎಂದು ಪೇಳ್ವಾರೊ 5

ಹರಿ ನಿನ್ನ ವಿಶ್ವನೆಂದು ಉಪಾಸನೆಯನು ಮಾಡಿ

ಹೇರಂಬ ನಿನ್ನ ಒಲಿಸಿದಾ-ಒಲಿಸಿದಾ

ಗಜವಕ್ತ್ರನಾಗಿ ನಿನ್ನ ಸ್ತುತಿಪಾನೋ 6

ಬಾಹ್ಯಾನುಭವಗಳಿಂದ ಇತರಾನುಭವವ

ದೇಹದೊಳು ಸ್ವಪನದಲಿ ನೀ ನೀಡಿ-ನೀ ನೀಡಿ

ಜೀವರುಪಭೋಗಿಸುವ ಸಾರವನು ರಕ್ಷೀಪೆ 7

ಸ್ವಪನಕಾಲದಲಿ ಕಂಠದೊಳು ನೀನಿದ್ದು

ಅಪರಿಮಿತಕಾರ್ಯ ಮನಸಿನಲ್ಲಿ-ಮನಸಿನಲ್ಲಿ

ತೈಜಸನೆ ವಾಸನಾಮಯವೆಲ್ಲ ತೋರೀಪೆ8

ಸ್ವಪನಕಾಲದಲಿ ದೇಹಾಭಿಮಾನದ

ವ್ಯಾಪಾರವೆಲ್ಲವ ಬಿಡಿಸೂವೆ-ಬಿಡಿಸೂವೆ

ತತ್ವಗಳ ವ್ಯಾಪಾರವೇ ವ್ಯಾಪಾರ9

ಸುಪ್ತಕಾಲದಿ ಜೀವ ಸ್ವರೂಪಕೆ ತಕ್ಕ

ಕ್ಲುಪ್ತ ಅe್ಞÁನ ಮೊದಲಾದ-ಮೊದಲಾದ

ಕಾಲವನನುಸರಿಸಿ ಜೀವನಿಗೆ ತನ್ನ ತಿಳಿಯಗೊಡದೆ 10

ಪ್ರಾಜ್ಞಮೂರುತಿ ನೀನೆ ಹೃದಯಸ್ಥಾನದೊಳಿದ್ದು

ಅe್ಞÁನಿ ಜೀವನ ಕಾಲಾವ-ಕಾಲಾವ

ನನುಸರಿಸಿ ಜೀವ ಸ್ವರೂಪಾನಂದವÀನು ನೀನೀವೆ11

ಸ್ವಪನ ಜಾಗ್ರತ e್ಞÁನವಿನಿತಿಲ್ಲವೆಂದು

ಸುಪ್ತಿಕಾಲದಿ ಪ್ರಾಜ್ಞ ನಿನ್ನಿಂದ-ನಿನ್ನಿಂದ

ಕೂಡುವ ಜೀವ ಆನಂದ ಹಿಂದೆಂದೂ ಕಾಣನೊ12

ಘನ ಬಹಿ ಪ್ರಾಜ್ಞ ತೈಜಸಾಂತ ಪ್ರಾಜ್ಞ

ಘನ ಪ್ರಾಜ್ಞ ಮೂರುತಿ-ಮೂರುತಿ

ಗಳುಪಾಸನೆ ಮಾಳ್ವ ಬುಧರೇನು ಧನ್ಯರೊ 13

ತುರ್ಯಾನಾಮಕ ಹರಿಯೆ ಶಿರವೆ ನಿನ್ನಾಯ ಸ್ಥಾನ

ಸೂರಿಗಳ e್ಞÁನಕ್ಕೆ ಗೋಚರ-ಗೋಚರ

ನಾಗಿ ನೀ ಕೊಡುತಿರುವೆ ಮುಕ್ತರಿಗೆ ಆನಂದ 14

ಮುಕ್ತರಿಗೆ ದೃಷ್ಟನೋ ಅದೃಷ್ಟನೋ ಅ-

ಮುಕ್ತರಿಗೆ ನಷ್ಟ ಪ್ರಾರಬ್ಧರ್ಗೆ ಲಭ್ಯನೋ-ಲಭ್ಯನಾಗುವೆ

ಗುರುಪ್ರಾಣನನುಗ್ರಹದಿ ಲಭ್ಯನಹುದಯ್ಯಾ ಹೇ ಜೀಯ 15

ಕಣ್ಮನ ಹೃದಯ ತ್ರಿಧಾಮಗಳಲ್ಲಿ ಇದ್ದು

ಉಣಿಸೂವೇ ಜೀವರಿಗೆ ಫಲಭೋಗ-ಫಲಭೋಗವು

ವಿಶ್ವತೈಜಸ ಪ್ರಾಜ್ಞ ಸ್ಥಿತಿಯೊಳು 16

ಸರ್ವರೂಪವು ಪೂರ್ಣ ಸರ್ವಗುಣ ಸಂಪೂರ್ಣ

ಸರ್ವೋತ್ಪಾದಕ ಸುಖರೂಪಿ-ಸುಖರೂಪಿ

ಸರ್ವಲೋಕ ಜೀವರೊಳಿದ್ದು ನಿರ್ಲಿಪ್ತಾ 17

ವರ್ಣತ್ರಯಯುತ ಓಂಕಾರದೊಳಾದ್ಯವರ್ಣ

ಅಕಾರದೊಳು ವಿಶ್ವ ನೀನೆ-ವಿಶ್ವನು ನೀನೆ

ಉಕಾರವೇ ತೈಜಸನು ಮಕಾರ ವಾಚ್ಯನೇ ಶ್ರೀಪ್ರಾಜ್ಞ 18

ನಾದದೊಳು ನೀ ವಾಚ್ಯ ತುರ್ಯರೆಂಬೋರು ನಿನ್ನ

ಸದನವಾಗಿಹುದೈ ಶಿರಸ್ಥಾನ-ಶಿರಸ್ಥಾನ

ನಾಶಿಕಾಗ್ರದಿ ಊಧ್ರ್ವ ದ್ವಾದಶಾಂಗುಲದಲ್ಲಿ ನೆಲೆಸಿರ್ಪೆ 19

ಭೋಗ್ಯವಿಷಯಗಳನು ಪ್ರಾಪಿಸುವ ವಿಶ್ವನೆ

ತೈಜಸನೊಡಗೂಡಿ ವಾಸನಾ-ವಾಸನಾಮಯ

ಕಳೆವ ಅe್ಞÁನಿ ಜೀವನನ್ನಾಡಿಸುವೆ ಶ್ರೀಪ್ರಾಜ್ಞ 20

ಸರ್ವಶಕ್ತನು ನೀನೆ ಸರ್ವಕತರ್Àನು ನೀನೆ

ಸವೋತ್ತಮನು ನೀನೆ ಸರ್ವಜ್ಞ-ಸರ್ವಜ್ಞ

ಪೂರ್ಣಪ್ರe್ಞÁಂತರ್ಯಾಮಿ ಸಲಹಯೈ21

ಏಸೇನು ಜನುಮದಲಿ ಏಸು ಸಾಧನವನ್ನು

ಏಸೇಸು ಮಾಡಲು ಇನ್ನೇನು-ಇನ್ನಾವ

ಪಲವಿಲ್ಲ ವಾಸುದೇವನೆ ನಿನ್ನ ದಯ ಬೇಕೊ 22

ನಾ ಸುಮ್ಮನಿದ್ದರೆ ಮನಸು ಸಮ್ಮತಿಸದೆ

ನೀ ಸುಮ್ಮನಿರದೆ ಎನ್ನನೂ-ಎನ್ನನು

ಪ್ರೇರಿಸುವೆ ಲೇಸುಮನ ನಿನ್ನಲ್ಲಿ ನೆಲೆಸಲೋ 23

ಕಂಡಕಂಡಲ್ಲಿ ನಾ ಉಂಡುಂಡು ಓಡಾಡಿ

ಧಾಂಡಿಗನಾಗಿ ಬೆಳೆದೆನೊ-ಬೆಳೆದೆನೊ

ನೊಂದೆನೋ ಪುಂಡರೀಕಾಕ್ಷ ನಿನ್ನ ಮರೆತೆನೋ24

ಅವಾವ ಕಾಲದೊಳು ನೀನಿದ್ದು ಉಣಿಸುವೆ

ಜೀವಕೃತ ಕರ್ಮಫಲಗಳ-ಫಲಗಳ

ಶ್ರೀ ವೇಂಕಟೇಶ ನೀನಿತ್ತು ಸಲಹೂವೇ 25

ಮಂದರೋಧ್ಧರ ಜಗದ ಬಂಧಮೋಚಕ ನೀನೆ

ವಂದನೆಯು ಒಂದೆ ಮನದಿಂದೆ-ಮನದಲಿ ನಿನ್ನ

ಪಾದಾರವಿಂದವ ತೋರಯ್ಯ26

ಬಂಧುಗಳು ಹಿತರೆನ್ನೆ ಬಂಧಕರಾಗಿಹರು

ಹಿಂದು ಮುಂದಕು ಎನ್ನ ಬಿಡದಲೆ-ಬಿಡದಲೆ ಭವಪಾಶ

ಬಂಧನಕೆ ನಾ ಇನ್ನು ಸಿಲುಕಿದೆ 27

ಜನನದಾರಭ್ಯದಿ ಜನನಿ ಜನಕರು ಬಿಡದೆ

ಘನವಾಗಿ ತನು ಬೆಳೆಸಿ ಹಿತದಿಂದ-ಹಿತದಿಂದ

ಮುಂದೆ ಪರಗತಿಯ ಕಾಣುವುದೆಂತೊ ಗೋವಿಂದ28

ವಿತ್ತಾಪಹಾರಕರು ಹೃತ್ತಾಪಕಳೆವರೆ

ನಿತ್ಯ ನೀನನಿಮಿತ್ತ ಬಾಂಧವನಾಗಿ-ಬಾಂಧವನಾಗಿ ನೀ

ಉತ್ತಮಗತಿಯ ತೋರಿಸು29

ಹರಿಕಥಾಪುರಾಣಶ್ರವಣ ನಿತ್ಯದೀ ಮಾಡೀ

ಪರಿಯಿಂದ ನಿಜತತ್ವವರಿಯಾದೆ-ಅರಿಯಾದೆ

ಬರಿದೇ ವಿಪರೀತ ಜ್ಞಾನಕೆ ವಶನಾದೆ30

ಮದ್ಯ ತುಂಬಿದ ಭಾಂಡ ಗದ್ಗುಗೆಯ ಮೇಲಿಟ್ಟು

ಶ್ರಧ್ದೆಯಿಂದಲಿ ಅದನ ಪೂಜಿಸೆ-ಪೂಜಿಸೆ

ಪೂತÀ ದುರ್ಗಂಧ ಫಲವದು ಬಿಟ್ಟೀತೆ 31

ಮಂದಹಾಸದಿ ಜನರ ಸಂದೋಹದಲಿ ಕುಳಿತು

ನಿಂದೆ ಮಾತುಗಳಾಡಿ ಮದತುಂಬೀ-ಮದತುಂಬಿಬಿದಾ ದುರ್ಮ

ದಾಂಧರಿಗೆ ಗತಿಯು ಮುಂದೆ ಇನ್ನೆಂತೊ32

ಕಂಡಕಂಡವರಲ್ಲಿ ಕೊಂಡೆ ಮಾತುಗಳಾಡಿ

ಪುಂಡರೀಕಾಕ್ಷ ನಿನ್ನ ಸ್ಮರಿಸಾದೆ-ಸ್ಮರಿಸದಲೆ

ಪರದಿ ಯಮದಂಡಕ್ಕೆ ಗುರಿಯಾದೆ33

ಹಿಂದೆ ಮಾಡಿದ ಪುಣ್ಯದಿಂದ ಇಂದಿನ ಭಾಗ್ಯ

ವೆಂದು ತಿಳಿದು ಮುಂದೆ ನಡೆಯಾದೆ-ನಡೆಯಾದೆ

ತಿಳಿಗೇಡಿ ಬುದ್ಧಿಯಿಂದ ಕುಂದುಪೊಂದುವೆ 34

ಬಾಯಿಮಾತಲ್ಲ ಶ್ರೀ ತೋಯಜಾಕ್ಷನ ಭಕ್ತ-

ರಾಯತನ ತಿಳಿವುದು ಶ್ರಮಸಾಧ್ಯ-ಶ್ರಮಸಾಧ್ಯ

ವನು ಸದುಪಾಯದಿಂದ ತಿಳಿದು ನಲಿದಾಡೊ 35

ನಿಂದಕರ ನುಡಿಯಿಂದ ಹಿಂದೆ ಮಾಡಿದ ಪಾಪ

ಒಂದೊಂದು ಪರಿಯಲ್ಲಿ ಪರಿಹಾರ-ಪರಿಹಾರವಾಗಿ

ನಿಂದಕರು ಬಂಧನಕೆ ಬೀಳ್ವಾರೋ 36

ಸ್ಮøತಿಯುಕ್ತಿಯನೆ ಬಿಟ್ಟು ಯುಕ್ತಿಮಾತುಗಳಿಂದ

ಹೊತ್ತು ಕಳೆಯುತ ಉನ್ಮತ್ತನೆನಿಸಿ-ಉನ್ಮತ್ತನೆನಿಸಿದವ ಇ-

ನ್ನೆತ್ತÀ್ತ ಭವಶರಧಿಯ ದಾಟÀುವ 37

ಪರರ ದೂಷಣೆಯಿಂದ ಹರಿ ಸ್ಮರಣೆ ಮಾಡದೆ

ಅರೆಘಳಿಗೆ ಕಳೆದುದಿಹ ನರಜನ್ಮ-ನರಜನ್ಮ ಬಂದುದು

ನರಕಯಾತನೆಗಲ್ಲದಿನ್ನಿಲ್ಲ 38

ಉದಯಾಸ್ತ ಪರಿಯಂತ ಉದರಭರಣಕಾಗಿ

ಉದಧಿಶಯನ ನಾ ನಿನ್ನ ಭಜಿಸಾದೆ-ಭಜಿಸಾದೆ

ಮದದಿಂದ ಬುಧಜನರ ನಿಂದೆಯ ಮಾಡೀದೆ39

ಇನ್ನಿಲ್ಲ ಪಾತಕವು ಅನ್ಯನಿಂದನೆಗಿಂತ

ಇನ್ನಲ್ಲ ಪರಗತಿಯ ಸಾಧನ-ಸಾಧನವು

ತನ್ನೊಳು ತÀನ್ನಿರವರಿತು ಸುಮ್ಮನಿರುವುದು ಅದು ನಿಧಾನ40

ಭಿನ್ನಜೀವರ ಗುಣ ಭಿನ್ನಕ್ರಿಯೆಗಳು

ಭಿನ್ನಧರ್ಮಂಗಳ ಗ್ರಹಿಸಾದೆ-ಗ್ರಹಿಸಾದೆ

ನೀನೆಣಿಸಿದೆ ತನ್ನಗುಣಧರ್ಮದಂತನ್ಯರಿಹನೇನೊ 41

ಕಾಯವೇ ತಾನೆಂದು ಮಾಯಕೆ ಒಳಗಾಗಿ

ಬಾಯಿ ಬಂದಂತೆ ಮಾತಾಡಿ-ಮಾತಾಡಿ ಈ ಜೀವ

ಕಾಯಯಾತನೆಗೊಂಡು ನೋಯುವಾ 42

ವಚನ ವಚನವು ಸರ್ವ ಉಚಿತ ದೇಹದ ಕಾರ್ಯ

ನಿಚಯದೊಳು ಹರಿ ಪ್ರಚುರನಾಗಿ-ಪ್ರಚುರನಾಗಿ

ಕಾಯಕುಪಚಯವಿತ್ತು ಸಲಹೂವ 43

ದೇಹ ಕಾಯದ ಕಾರ್ಯಪ್ರಕ್ರಿಯವ ತಿಳಿಯಾದೆ

ಮಾಯೆಗೊಳಗಾಗದಿರು ಹೇ ಮಾನವಾ-ಮಾನವನೆ ತಿ-

ಳಿಯೊ ಮಾಯಾರಮಣನ ಬಿಂಬಕ್ರಿಯವಾ44

ತನ್ನೊಳಗೆ ಇಹ ಷಡ್ವೈರಿಗಳ ಗೆಲ್ಲದವ

ಅನ್ಯರೊಳು ನೀ ಹೋರಾಡಬಲ್ಲೆಯ-ಬಲ್ಲೆಯಾ

ನಿನ್ನ ವೈರಿಗಳ ಜಯಿಸಲರಿಯದ ಖೂಳ ರಣಹೇಡಿ 45

ಕೊಳೆತು ನಾರುವ ದೇಹದೊಳಗಿರುವ ಹುಳುಕುಗಳ

ಕೊಳೆಯ ಕಳೆಯದ ಮನುಜ ನೀನೆಂತೊ-ನೀನೆಂತೊ

ಕೊಳೆತÀ ಸಗಣಿಯೊಳಗಿಹ ಹುಳುವೆ ನಿನ್ನ ಗತಿಯೆಂತೊ46

ಆದದ್ದು ಆಯಿತು ಯತ್ನ ತಪ್ಪಿತು ಎಂದು

ಹೆದ್ದಾರಿ ಹಿಡಿದು ಪರಮಾರ್ಥ-ಪರಮಾರ್ಥವ

ಬುದ್ಧಿ ತಿದ್ದಿಕೊಳ್ಳಲು ಮುಂದೆ ಅನುವಾಗೊ47

ತತ್ತ ್ವದೇವತೆಗಳು ತತ್ತತ್ವಕಾರ್ಯಜಿ-

ವೋತ್ತಮನಾಜ್ಞೆಯಿಂ ತಾವ್ ಗೈವರೊ-ತಾವ್‍ಗÉೈ

ಯುತ್ತಲಿರೆ ನಾನೆತ್ತ ಮೃತ್ತಿಕಾಪ್ರತಿಮೆಯೋ48

ಒಂದೊಂದು ರೀತಿಯಿಂ ಚೆಂದಾಗಿ ಯೋಚಿಸು

ಮಂದಮತಿಯು ನೀನು ಹಿಂದೆಂತೂ-ಹಿಂದೇನು

ಮುಂದೇನು ಇಂದೆ ಗೋವಿಂದನಾ

ವಂದನೆಯೊಂದಲ್ಲದಿನ್ನಿಲ್ಲ49

ಡಾಂಭಿಕತನ ಬಿಟ್ಟು ಡಿಂಬದೊಳು ಸರ್ವದಾ

ಅಂಬುಜನಾಭನೇ ಇಂಬಾಗಿ-ಇಂಬಾಗಿ ಸರ್ವತ್ರ

ತುಂಬಿಕೊಂಡಿಹನೆಂದು ನಲಿದಾಡೋ 50

ತುಷ್ಟಿಯಾಗಿರು ನೀನು ಕೊಟ್ಟಷ್ಟು ಲಾಭಕ್ಕೆ

ದುಷ್ಟವಿಷಯಗಳಿಗೆ ಎರಗಾದೆ-ಎರಗಾದೆ ಇರಲು ಸಂ-

ತುಷ್ಟ ನಾಗುವನಯ್ಯ ಶ್ರೀಕೃಷ್ಣ51

ಕಾಯ ನಿನ್ನದು ಅಲ್ಲ ಮನವು ಅಧೀನವಲ್ಲ

ಹೇಯವಿಲ್ಲದೆ ಮಾಯಕೊಳಗಾಗಿ ಮರುಳಾಗದಲೆ-ಮರುಳಾಗದಲೆ

ಮಾಯಾರಮಣನ್ನ ನೆನೆಯೊ ನಿರ್ಭಯದಿಂದ 52

ಹಲವು ಶಾಸ್ತ್ರವ ನೋಡಿ ತಲೆಹರಟೆಯ ಬಿಟ್ಟು

ಅಲವಬೋಧರ ತತ್ತ ್ವಸುಧೆಯನ್ನು- ಸುಧೆಯನ್ನು ಸವಿದು ನಿ-

ರ್ಮಲ e್ಞÁನ ದೊಳು ನಲಿದಾಡೆÀೂ

(few lines missing ?)

****


No comments:

Post a Comment