ಶ್ರೀಧರಾ ನೀನೆ ಎನ್ನ ಹೃದಯ ಕಮಲದೊಳಿದ್ದು
ಮಾಡಿಸಿದ್ದು ನಾ ಮಾಡಿದೆನೊ ಪ
ಹಿಂದೆ ಮಾಡಿದ್ದೇನು ಇಂದು ಮಾಡುವುದೇನು
ಮುಂದೆ ಮಾಡತಕ್ಕದ್ದೇನು ತಂದೆ ಅ.ಪ
ಹಿಂದೆ ನಿನ್ನಯ ಜನರ ವಂದಿಸದೆ ಭವ-
ಬಂಧನದಿ ನಾ ನೊಂದೆನೋ
ಇಂದು ತೀರಿತು ಅದಕೆ ತಕ್ಕಮುಯ್ಯವು ಎನಗೆ ಆ-
ನಂದ ವಾಯಿತು ನಿನ್ನ ಕರುಣಾರಸಕೆ
ಮಂದಭಾಗ್ಯನಿಗೆ ನೀ ತಂದಂಥ ಬಂಧನವ
ಬಂಧಿಸಿ ಎನ್ನಿಂದ ವಂದನೆಯ ಕೊಂಡೆ1
ಮೂರು ದಿನದಲಿ ಹಿಂದೆ ತೋರಿದಂದದಿ ಎನ್ನ ಅ-
ಪರಾಧಗಳ ಎಣಿಸಲಿಲ್ಲ
ಬಾರಿ ಬಾರಿಗೆ ಗುರುಗಳು ಕಾದಿಹರು ಎಂದೆನ್ನ
ಎಚ್ಚರಿಸಿದುದಕೆ ನಾ ಮೈಮರೆದೆನೊ
ಮಾರಮಣನೇ ನೀ ಗುರುವಾಸರದಿ
ತ್ವರಿತದೊಳು ಹರಿ ಗುರು ಪೂಜೆಗೆ ಕಾತರವನಿತ್ತೆ 2
ಸರ್ವಸೇವೆಯ ನೀ ಕರುಣದಿ ಸ್ವೀಕರಿಸು
ಶರಣರಕ್ಷಕನಹುದೊ ನೀನು
ಉರಗಗಿರಿವಾಸ ಶ್ರೀ ವೇಂಕಟೇಶನೆ ಎನ್ನ
ಸರ್ವಾಪರಾಧಗಳ ಕ್ಷಮಿಸೋ
ಅರಿತವನು ನಾನಲ್ಲವೆಂದೆನ್ನ ಕೈಬಿಡದೆ
ದುರಿತ ಪರಿಹರಿಸಿ ಕಾಯೋ ಶೌರೆ3
****
No comments:
Post a Comment