..
kruti: tandevaradagopala vittala (ಪ್ರಹ್ಲಾದಗೌಡರು)
ಜ್ಞಾನವನೆ ಕೊಟ್ಟು ಸಲಹೊ ಶ್ರೀ ಪ್ರಾಣರಾಯಾ ಪ
ವಿಜ್ಞಾನ ಮಸ್ತಕ ಘನ ಗಿರೀಶಗೆ ರಾಜನೇ ಅ.ಪ.
ಅಂದು ಅಂಜನೆ ಕಂದನೆನಿಸಿ ರಘುಕುಲೇಂದ್ರನ ನಾಮದುಂಗುರ ಇಂದುಮುಖಿಯಳಿಗಿತ್ತು ಖಳನಂದನನ ಮಡುಹಿದ ಧೀರವಿಜ್ಞಾ£ À 1
ಭವಭಯಕೆ ನಿರ್ಭೀಕರಾನೆನಿಸಿ ಭಾನುಸುತನಾಶ್ರಯಿಸಿದವ ಭೇದವಿಲ್ಲದೆ ಬಹುಬಾಧೆ ಬಿಡಿಸಿ ಭೂಭಾರನಿಳುಹಿದೇ ಭಾವಿ ಬ್ರಹ್ಮ ಸುಜ್ಞಾನ 2
ದಾಸರೆಲ್ಲರೂ ಮಹಿಮ ದಾಸರಾಗುತಿರೆ ಸಮಯ ಸೂಸುತ ಶಶಿಯಂತೆ ವಸುಧಿಗಿಳಿದು ಪೋಷಿಸಿದೆ ತಂದೆವರದಗೋಪಾಲವಿಠಲನ ದಾಸಾ 3
***
No comments:
Post a Comment