Thursday, 5 August 2021

ಕೃಷ್ಣಾತೀರದಿ ಕುಳಿತಿಷ್ಟವ ಸಲಿಸುವನ್ಯಾರೇ ಪೇಳಮ್ಮಯ್ಯ ankita tandevaradagopala vittala satyaparakrama teertha stutih

 ..


kruti: tandevaradagopala vittala (ಪ್ರಹ್ಲಾದಗೌಡರು)

ಸತ್ಯ ಪರಾಕ್ರಮರು


ಕೃಷ್ಣಾತೀರದಿ ಕುಳಿತಿಷ್ಟವ ಸಲಿಸುವನ್ಯಾರೇ ಪೇಳಮ್ಮಯ್ಯ ಪ


ಕಷ್ಟರಹಿತ ಸಂತುಷ್ಟರೆನಿಪ ಸತ್ಯೇಷ್ಟತೀರ್ಥ ಕರಜಪರಾಕ್ರಮರೇ ಅ.ಪ.


ಭಾಸುರ ಪದರಜ ಭಾವಿ ಸಮೀರ ಭೂಷಿತನ್ಯಾರೇ ಪೇಳಮ್ಮಯ್ಯಾ ಭೇದಮತಿಯುತಾ ಸತ್ಯದಿ ಬೋಧಿಪನ್ಯಾರೆ ಪೇಳಮ್ಮಯ್ಯಾ ಭೇದ ಪೇಳದ ಮತ ದುರ್ಬೋಧವ ಭೇದಿಪನ್ಯಾರೆ ಪೇಳಮ್ಮಯ್ಯ ಬೋಧ ಮುನಿಯು ಮತ ಶುಭವಾರಿಧಿ ತಾರಕೆ ತಾರೆನೆನಿಪ ಜೀವತಾರ ಶಶಿಕಾಣಮ್ಮ 1

ಚಂದ್ರಪೋಲುವ ಮುಖಕಮಲಗಳಿಂದೊಪ್ಪುವನ್ಯಾರೆ ಪೇಳಮ್ಮಯ್ಯ ಚಂದ್ರನಂತೆ ಶುಭ ತಿಲುಕಾಂಕಿತದಿಂದೊಪ್ಪುವನ್ಯಾರೆ ಪೇಳಮ್ಮಯ್ಯಚಂದ್ರಕಂಠಮಾಲೆ ಕರದಿ ದಂಡವ ಧರಿಸಿಹನ್ಯಾರೆ ಪೇಳಮ್ಮಯ್ಯ ಚಂದ್ರಚರಣ ನಖಶಿಖ ಪರಿಪೂರ್ಣದಿಂದೊಪ್ಪುವ ಗುರುವರ್ಯ ಕಾಣಮ್ಮ 2

ವೃಂದಾವನವರ ಮಂದಿರ ಮಧ್ಯದಿ ರಾಜೀವನ್ಯಾರೇ ಪೇಳಮ್ಮಯ್ಯ ವೃಂದಾರಕ ವರವೃಂದ ವಿನುತನ್ಯಾರೆ ಪೇಳಮ್ಮಯ್ಯ ವೃಂದಾವನ ಸುಂದರ ಗುಣಗಳಿಂಧೊಳೆ ಯುವನ್ಯಾರೆ ಪೇಳಮ್ಮಯ್ಯ ವೃಂದಾವನದೊಳಗಾಶ್ರಿತ ತಂದೆವರದಗೋಪಾಲವಿಠಲನಸೇವಿಪರೇ 3

***


No comments:

Post a Comment